alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಯ್ತು ಮಹಿಳೆಯ ಅಸಲಿಯತ್ತು

ಬೆಂಗಳೂರು: ತನ್ನನ್ನು ಮೂವರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಮಹಿಳೆಯೊಬ್ಬರು ಬ್ಯಾಟರಾಯನಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಮಹಿಳೆಯ ನಿಜಬಣ್ಣ ಗೊತ್ತಾಗಿದೆ. ಪತಿಯಿಂದ ದೂರವಾಗಿ ಪ್ರಿಯಕರನೊಂದಿಗೆ ಹೋಗಲು ಮುಂದಾದ ಮಹಿಳೆ ಗ್ಯಾಂಗ್ ರೇಪ್ ಕತೆ ಕಟ್ಟಿದ್ದಾಳೆ ಎಂಬುದು ತಿಳಿದು ಬಂದಿದೆ.

ಬೆಂಗಳೂರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಜನವರಿ 5 ರಂದು ರಾತ್ರಿ ಮಹಿಳೆಯೊಬ್ಬರು ಆಗಮಿಸಿ ದೂರು ನೀಡಿದ್ದಾರೆ. ತನ್ನನ್ನು ಮಾರುತಿ ಓಮ್ನಿಯಲ್ಲಿ ಬಂದಿದ್ದ ಮೂವರು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಒಡವೆ ದೋಚಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ ಸಂದರ್ಭದಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆಯನ್ನು ಅಪಹರಿಸಿದ್ದ ಸ್ಥಳಗಳಿಗೆ ತೆರಳಿ ಪೊಲೀಸರು ಪರಿಶೀಲಿಸಿ ಮಾಹಿತಿ ಕಲೆ ಹಾಕಿದಾಗ, ಮಹಿಳೆಯೇ ಕಲರ್ ಫುಲ್ ಕತೆ ಕಟ್ಟಿರುವುದು ಗೊತ್ತಾಗಿದೆ.

ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ, ಸುರೇಶ್ ಎಂಬುವವನನ್ನು ಪ್ರೀತಿಸಿದ್ದ ಮಹಿಳೆ ಗಂಡನಿಂದ ದೂರವಾಗಲು ಪ್ಲಾನ್ ಮಾಡಿದ್ದಾಳೆ. ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಬಿಂಬಿಸಿದರೆ ಪತಿ ತಾನಾಗೇ ದೂರವಾಗ್ತಾನೆ. ಬಳಿಕ ಪ್ರಿಯಕರನೊಂದಿಗೆ ಹೋಗಬಹುದೆಂದು ಭಾವಿಸಿದ್ದು, ಅದರಂತೆಯೇ ಕಟ್ಟುಕತೆ ಕಟ್ಟಿದ್ದಾಳೆ. ಒಡವೆಯನ್ನು ಹಿಂದಿನ ದಿನವೇ ಪ್ರಿಯಕರನಿಗೆ ಕೊಟ್ಟಿದ್ದಾಳೆ. ಇದೆಲ್ಲವೂ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದ್ದು, ಸುಳ್ಳು ದೂರು ನೀಡಿದ್ದ ಮಹಿಳೆ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...