alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿ ವೇಷದಲ್ಲಿ ಬಂದವನಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ಮಹಿಳೆಯ ಪ್ರಜ್ಞೆ ತಪ್ಪಿಸಿದ ಸನ್ಯಾಸಿಯೊಬ್ಬ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ಅಶೋಕನಗರದ ನಿವಾಸಿ ಸಂಧ್ಯಾ ಅವರ ಮನೆಗೆ ಆಗಮಿಸಿದ್ದ ಅಪರಿಚಿತ ಸನ್ಯಾಸಿ, ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ನಂತರದಲ್ಲಿ ಮಹಿಳೆಯ ಹಣೆಗೆ ಭಸ್ಮವನ್ನು ಹಚ್ಚಿದ್ದು, ಇದಾದ ಕೆಲ ಸಮಯದಲ್ಲೇ ಸಂಧ್ಯಾ ಅವರು ಪ್ರಜ್ಞೆ ತಪ್ಪಿದ್ದಾರೆ.

ಸನ್ಯಾಸಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಸಂಧ್ಯಾ ಅವರ ಸಂಬಂಧಿಯೊಬ್ಬರು ಮನೆಗೆ ಬಂದಾಗ ಈ ವಿಷಯ ಗೊತ್ತಾಗಿದೆ. ಸಂಧ್ಯಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವಿಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...