alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ಹೆಸರಲ್ಲಿ ವಂಚನೆ

pro-ssdt

ಬೆಂಗಳೂರು: ವೇಶ್ಯಾವಾಟಿಕೆ ಹೆಸರಲ್ಲಿ 10,000 ರೂ. ಹಣ ಪಡೆದು ವಂಚಿಸಿದ ಘಟನೆ ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ವೆಬ್ ಸೈಟ್ ನಲ್ಲಿ ಕಾಲ್ ಗರ್ಲ್ ನೋಡಿ 1 ರಾತ್ರಿಗೆ 15,000 ರೂ.ಗೆ ಬುಕ್ ಮಾಡಿದ್ದ ನವೀನ್ ಎಂಬಾತ ಹಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

ವೆಬ್ ಸೈಟ್ ನಲ್ಲಿದ್ದ ಮೊಬೈಲ್ ಗೆ ಕರೆ ಮಾಡಿದ್ದ ನವೀನ್ ನನ್ನು, ಜೂನ್ 13 ರಂದು ರಾತ್ರಿ ಇಂದಿರಾ ನಗರ 100 ಅಡಿ ರಸ್ತೆಗೆ ಕರೆಸಿಕೊಂಡ ಹರೀಶ್, ಸುರೇಶ್ ಎಂಬುವವರು 10,000 ರೂ. ಹಣ ಪಡೆದು, 2 ನೇ ಮಹಡಿಗೆ ಹೋಗುವಂತೆ ಕಟ್ಟಡವೊಂದನ್ನು ತೋರಿಸಿದ್ದಾರೆ.

ಅಲ್ಲಿಗೆ ಹೋದ ನವೀನ್ ಗೆ ಯಾವುದೇ ಸರ್ವೀಸ್ ಇಲ್ಲದೇ ತಾನು ಮೋಸ ಹೋಗಿರುವುದು ಗೊತ್ತಾಗಿ, ಬುಕ್ ಮಾಡಿಸಿಕೊಂಡಿದ್ದವನ ಮೊಬೈಲ್ ಗೆ ಕರೆ ಮಾಡಿದ್ದಾರೆ. ಅದು ಸ್ವಿಚ್ ಆಫ್ ಆಗಿದೆ.

ಕೆಳಗೆ ಬಂದು ನೋಡಿದಾಗ ಹಣ ಪಡೆದುಕೊಂಡಿದ್ದ ಹರೀಶ್, ಸುರೇಶ್ ನಾಪತ್ತೆಯಾಗಿದ್ದಾರೆ. ಇದರಿಂದ ಬೇಸ್ತು ಬಿದ್ದ ನವೀನ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...