alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ವೆಬ್ ಸೈಟ್ ನಲ್ಲಿ ದಂಪತಿಯ ಖಾಸಗಿ ದೃಶ್ಯ

ಬೆಂಗಳೂರು: ದಂಪತಿಯ ಖಾಸಗಿ ಕ್ಷಣದ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿದು, ಅಶ್ಲೀಲ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಕುರಿತು ಮಹಿಳೆ ಸಿ.ಐ.ಡಿ. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿರುವ ವ್ಯಕ್ತಿಗೆ ಸೆಪ್ಟಂಬರ್ ನಲ್ಲಿ ಇಂಟರ್ ನೆಟ್ ಕರೆ ಮಾಡಿದ್ದ ವ್ಯಕ್ತಿ, ಅಶ್ಲೀಲ ವೆಬ್ ಸೈಟ್ ನಲ್ಲಿ ನಿಮ್ಮ ಖಾಸಗಿ ಕ್ಷಣದ ವಿಡಿಯೋ ಇರುವುದಾಗಿ ತಿಳಿಸಿದ್ದಾನೆ.

ಅದರಂತೆ ವೆಬ್ ಸೈಟ್ ವೀಕ್ಷಿಸಿದಾಗ, ದಂಪತಿಯ ವಿಡಿಯೊ ಇರುವುದು ಕಂಡು ಬಂದಿದ್ದು, ಮಾಹಿತಿ ತಿಳಿದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.

ಅವರ ಮನೆ ಮಾಲೀಕನ ಮಗನ ಬಳಿ ನಕಲಿ ಕೀ ಇದ್ದು, ಆತನೇ ರಹಸ್ಯ ಕ್ಯಾಮೆರಾ ಮೂಲಕ ದಂಪತಿಯ ಖಾಸಗಿ ಕ್ಷಣದ ದೃಶ್ಯಗಳನ್ನು ಸೆರೆ ಹಿಡಿದು ಅಪ್ ಲೋಡ್ ಮಾಡಿರಬಹುದೆಂದು ಶಂಕಿಸಲಾಗಿದೆ. ಕೊನೆಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...