alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಸವಾರರ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಬೈಕ್ ಸವಾರರ ಮೇಲೆ ಶೂ ಎಸೆದ ಘಟನೆ ನಡೆದಿದೆ. ನ್ಯೂ ಬಿ.ಇ.ಎಲ್. ರಿಂಗ್ ರಸ್ತೆಯಲ್ಲಿ 2 ದಿನಗಳ ಹಿಂದೆ ಜಾಲಹಳ್ಳಿ ಸಂಚಾರ ಠಾಣೆಯ ಎಸ್.ಐ. ಎದುರಲ್ಲೇ ಪೊಲೀಸ್ ಶೂ ಎಸೆದಿದ್ದು, ರಿಶಬ್ ಚಟರ್ಜಿ ಎಂಬುವವರ ಕಾರಿನ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ.

ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ತೆರಳುತ್ತಿದ್ದ ಸವಾರರನ್ನು ಗಮನಿಸಿದ ಪೊಲೀಸ್ ತನ್ನ ಶೂ ತೆಗೆದು ಅವರ ಮೇಲೆ ಎಸೆದಿದ್ದಾರೆ. ರಿಶಬ್ ಚಟರ್ಜಿ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಸುಮಾರು 20,000 ಮಂದಿ ಇದನ್ನು ವೀಕ್ಷಿಸಿದ್ದು, ಪೊಲೀಸ್ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...