alex Certify
ಕನ್ನಡ ದುನಿಯಾ       Mobile App
       

Kannada Duniya

ಜನಮೆಚ್ಚುವ ಕೆಲಸ ಮಾಡಿದ್ದಾರೆ ಬೆಂಗಳೂರಿನ ಸಂಚಾರಿ ಪೊಲೀಸ್

bengaluru-cop_759_dcp-traffic-east-twitter

ಭಾರತದಲ್ಲಿ ಪೊಲೀಸ್ ಕೆಲಸ ಅಷ್ಟು ಸುಲಭವಲ್ಲ. ಜನರ ರಕ್ಷಣೆಯೇ ಅವರ ಹೊಣೆಯಾದ್ರೂ ವಿಐಪಿಗಳ ಜೊತೆಗೆ ಹೆಣಗಾಡೋದು ಅಂದ್ರೆ ಧರ್ಮಸಂಕಟವಿದ್ದಂತೆ. ಎಷ್ಟೋ ಬಾರಿ ವಿಐಪಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪೊಲೀಸರು ಜನರ ಕೆಂಗಣ್ಣಿಗೆ ಗುರಿಯಾಗ್ತಾರೆ.

ಆದ್ರೆ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಒಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ.  ವಿಐಪಿಗಿಂತ್ಲೂ ಜನರ ಕ್ಷೇಮವೇ ಮುಖ್ಯ ಅನ್ನೋದನ್ನು ಸಾಬೀತು ಮಾಡಿದ್ದಾರೆ. ರಾಷ್ಟ್ರಪತಿಗಳ ಬೆಂಗಾವಲು ವಾಹನವನ್ನೇ ತಡೆದು ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ.

ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂ.ಎಲ್.ನಿಜಲಿಂಗಪ್ಪ ಬೆಂಗಳೂರಿನ ಟ್ರಿನಿಟಿ ಸರ್ಕಲ್ ನಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ರು. ಈ ವೇಳೆ ರೋಗಿಯನ್ನು ಹೊತ್ತಿದ್ದ ಆಂಬ್ಯುಲೆನ್ಸ್ ಅದೇ ಮಾರ್ಗವಾಗಿ ಬಂದಿತ್ತು. ಅದೇ ಸಮಯಕ್ಕೆ ಸರಿಯಾಗಿ ರಾಷ್ಟ್ರಪತಿಗಳ ಬೆಂಗಾವಲು ವಾಹನವೂ ಆಗಮಿಸಿತ್ತು.

ಪ್ರಣಬ್ ಮುಖರ್ಜಿ ಅವರ ಬೆಂಗಾವಲು ವಾಹನ ರಾಜಭವನದ ಕಡೆಗೆ ಹೊರಟಿದ್ರೆ, ಆಂಬ್ಯುಲೆನ್ಸ್ ಎಚ್ ಎ ಎಲ್ ಬಳಿಯ ಖಾಸಗಿ ಆಸ್ಪತ್ರೆಗೆ ತೆರಳಬೇಕಿತ್ತು. ಬೆಂಗಾವಲು ವಾಹನವನ್ನು ತಡೆದು ನಿಲ್ಲಿಸಿದ ನಿಜಲಿಂಗಪ್ಪ, ಆಂಬ್ಯುಲೆನ್ಸ್ ಗೆ ಮುಂದಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ರಸ್ತೆಯುದ್ದಕ್ಕೂ ಆಂಬ್ಯುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ತಮ್ಮ ಸಹೋದ್ಯೋಗಿಗಳಿಗೂ ಸೂಚಿಸಿದ್ದಾರೆ.

ನಿಜಲಿಂಗಪ್ಪ ಅವರ ಕರ್ತವ್ಯ ನಿಷ್ಠೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಕೂಡ ಅವರನ್ನು ಶ್ಲಾಘಿಸಿದ್ದಾರೆ. ಅವರ ಸಮಯಪ್ರಜ್ಞೆಯನ್ನು ಗೌರವಿಸಿ ಪ್ರಶಸ್ತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...