alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲೂ ಆರಂಭವಾಗಲಿದೆ ಐಕೆಇಎ ಸ್ಟೋರ್

ದೇಶದ ಸಾಫ್ಟ್ ವೇರ್ ನಗರ ಬೆಂಗಳೂರಿನಲ್ಲಿ 2020 ರ ವೇಳೆಗೆ ಐಕೆಇಎ ತನ್ನ ಮೂರನೆಯ ಸ್ಟೋರನ್ನು ತೆರೆಯಲಿದೆ. ಸ್ವೀಡಿಶ್ ಮೂಲದ ಪೀಠೋಪಕರಣ ಮತ್ತು ಗೃಹ ಉತ್ಪನ್ನಗಳ ಬೃಹತ್ ಕಂಪನಿ ಎರಡು ತಿಂಗಳ ಹಿಂದೆ ಹೈದರಾಬಾದ್ ನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿತ್ತು. ಮುಂದಿನ ವರ್ಷ ಮುಂಬೈಯಲ್ಲಿ ಎರಡನೆಯ ಮಳಿಗೆ ಆರಂಭವಾಗುವ ನಿರೀಕ್ಷೆಯಿದೆ.

500,000 ಚದರ ಅಡಿಗಳ ಔಟ್ಲೆಟ್ ನಿರ್ಮಾಣದ ಭೂಮಿ ಪೂಜೆ ಸಮಾರಂಭವು ನಾಗಸಂದ್ರದಲ್ಲಿ ನೆರವೇರಿದೆ. ಕರ್ನಾಟಕ ಸರ್ಕಾರವು ಇದಕ್ಕೆ ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, “ಅವರು 750 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಈ ಪೈಕಿ ಶೇ 50 ರಷ್ಟು ಮಹಿಳೆಯರೆಂದು ತಿಳಿದುಬಂದಿದೆ. ಸುಮಾರು 1500 ಕೋಟಿಗಳಷ್ಟು ಹಣ ಹೂಡಿಕೆ ಮಾಡಲಿದ್ದು, ಭವಿಷ್ಯದಲ್ಲಿ ಇದು ಇನ್ನೂ ಹೆಚ್ಚಲಿದೆ” ಎಂದು ಹೇಳಿದ್ದಾರೆ.

ಐಕೆಇಎ ನ ಡೆಪ್ಯುಟಿ ಕಂಟ್ರಿ ಮ್ಯಾನೇಜರ್ ಪ್ಯಾಟ್ರಿಕ್ ಆಂಟೋನಿ, ನಮ್ಮ ಮಳಿಗೆಗಳಿಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದು ನಮ್ಮ ಯಶಸ್ಸು. ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳು ಮತ್ತು ಪೀಠೋಪಕರಣಗಳನ್ನು ದೊರೆಯಲಿದೆ. ಈ ಕಟ್ಟಡ ನಿರ್ಮಾಣಕ್ಕೆ ಸುಮಾರು 1,000 ಕೋಟಿ ವೆಚ್ಚ ತಗುಲಲಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...