alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ

ಮಹಿಳಾ ಪ್ರಯಾಣಿಕರಿಗೆ ಭಾರತದ ಅನೇಕ ನಗರಗಳಲ್ಲಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಹೊಸ ವರ್ಷದ ವೇಳೆಗೆ ಪಿಂಕ್ ಆಟೋಗಳು ಮಹಿಳಾ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿವೆ.

ಮಹಿಳೆಯರಿಂದ ನಡೆಸಲ್ಪಡಲಿರುವ ಪಿಂಕ್ ಆಟೋಗಳು ಮಹಿಳೆಯರು ಮತ್ತು ಮಕ್ಕಳನ್ನು ಮಾತ್ರ ಕರೆದೊಯ್ಯಲಿವೆ. ಇದರ ಆರಂಭಿಕ ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿ.ಬಿ.ಎಂ.ಪಿ.) ಮಹಿಳೆಯರಿಗೆ ಆಟೋಗಳನ್ನು ಖರೀದಿಸಲು ಸಬ್ಸಿಡಿ ನೀಡಲಿದೆ.

ಸಾಮಾಜಿಕ ಕಲ್ಯಾಣ ಯೋಜನೆಯಡಿ 400 ಪಿಂಕ್ ಆಟೋಗಳನ್ನು ಮಹಿಳೆಯರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸಿದ ಮೊದಲ ನಗರ ಬೆಂಗಳೂರು ಆಗಿದೆ. ಇದರೊಂದಿಗೆ ರಾಜ್ಯ ಸರ್ಕಾರ ಪಿಂಕ್ ಹೊಯ್ಸಳ ಪೊಲೀಸ್ ಪೆಟ್ರೋಲ್ ಸೇವೆಯನ್ನು ಆರಂಭಿಸಿದೆ.

ಸದ್ಯ ಗಾಜಿಯಾಬಾದ್, ಗುರುಗಾಂವ್, ಮುಂಬೈ, ಪುಣೆ, ಸೂರತ್, ರಾಂಚಿ, ಭುವನೇಶ್ವರ ಮೊದಲಾದ ನಗರಗಳಲ್ಲಿ ಈ ವಾಹನ ಸೇವೆ ನೀಡಲಾಗ್ತಿದೆ. ಹೊಸ ವರ್ಷದ ವೇಳೆಗೆ ಬೆಂಗಳೂರಿನ ಮಹಿಳೆಯರಿಗೆ ಈ ಸೌಲಭ್ಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...