alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಟೆಲ್ ಮಾಲೀಕನಿಗೆ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ

ಬೆಂಗಳೂರು: ಹೋಟೆಲ್ ಮಾಲೀಕನ ಮೇಲೆ ಎ.ಸಿ.ಪಿ. ಹಲ್ಲೆ ನಡೆಸಿದ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಎ.ಸಿ.ಪಿ. ವಿರುದ್ಧ ದೂರು ನೀಡಿದ್ದ ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಹಾಕಲಾಗಿದೆ.

ಶೆಟ್ಟಿ ಅವರಿಗೆ ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದು, ಆಸ್ಟ್ರೇಲಿಯಾದಿಂದ ರವಿ ಪೂಜಾರಿ ಮಾತನಾಡುತ್ತಿದ್ದೇನೆ. ಇನ್ನು ಅರ್ಧಗಂಟೆಯಲ್ಲಿ ಹೋಟೆಲ್ ಬಾಗಿಲು ಹಾಕಬೇಕು. ಬಾಗಿಲು ಹಾಕದಿದ್ದರೆ ಗುಂಡು ಹಾರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ರಾಜೀವ್ ಶೆಟ್ಟಿ ಅವರು ನಿಯಮ ಮೀರಿ ಹೋಟೆಲ್ ಬಾಗಿಲು ತೆರೆದ ಕಾರಣಕ್ಕೆ ಸ್ಥಳಕ್ಕೆ ತೆರಳಿದ್ದ ಎ.ಸಿ.ಪಿ. ಅವರ ಮೇಲೆ ಹಲ್ಲೆ ಮಾಡಿದ್ದು, ಈ ದೃಶ್ಯಗಳೆಲ್ಲಾ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಎ.ಸಿ.ಪಿ. ವಿರುದ್ಧ ರಾಜೀವ್ ಶೆಟ್ಟಿ ದೂರು ನೀಡಿದ್ದು, ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಹೀಗಿರುವಾಗಲೇ ರಾಜೀವ್ ಶೆಟ್ಟಿ ಅವರಿಗೆ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...