alex Certify
ಕನ್ನಡ ದುನಿಯಾ       Mobile App
       

Kannada Duniya

ಜೀನ್ಸ್, ಮಿನಿ ಸ್ಕರ್ಟ್ ಧರಿಸಿದವರಿಗೆ ಈ ದೇವಾಲಯಕ್ಕೆ ನೋ ಎಂಟ್ರಿ

ಬೆಂಗಳೂರಿನ ಆರ್ ಆರ್ ನಗರದಲ್ಲಿರೋ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಹಾಗಾಗಿ ಇನ್ನು ಮೇಲೆ ಮಹಿಳೆಯರು ಜೀನ್ಸ್, ಮಿನಿ ಸ್ಕರ್ಟ್ ಹಾಗು ಸ್ಲೀವ್ ಲೆಸ್ ಡ್ರೆಸ್ ಗಳನ್ನು ಧರಿಸಿ ದೇವಾಲಯಕ್ಕೆ ಬರುವಂತಿಲ್ಲ.

ದೇವಾಲಯದ ಹೊಸ ನಿಯಮದ ಪ್ರಕಾರ ಪುರುಷರು ಧೋತಿ ಅಥವಾ ಪ್ಯಾಂಟ್ ಧರಿಸಿ ದೇವಸ್ಥಾನದೊಳಗೆ ಪ್ರವೇಶಿಸಬೇಕು. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಬೇಕು. ದುಪ್ಪಟ್ಟಾ ಹೊದೆಯುವುದು ಕಡ್ಡಾಯ.

ಸ್ಟೈಲಾಗಿ ಕೂದಲು ಬಿಟ್ಟುಕೊಂಡು ಬರುವಂತಿಲ್ಲ. ರಬ್ಬರ್ ಬ್ಯಾಂಡ್ ನಿಂದ ನೀಟಾಗಿ ಪೋನಿಟೈಲ್ ಹಾಕಿಕೊಂಡಿರಬೇಕು, ಅಥವಾ ಜಡೆ ಹಾಕಿರಬೇಕು. ಬರ್ಮುಡಾ, ಶರ್ಟ್, ಮಿನಿ ಸ್ಕರ್ಟ್, ಸ್ಲೀವ್ ಲೆಸ್ ಟಾಪ್, ಮಿಡಿ, ಲೋ ವೇಸ್ಟ್ ಜೀನ್ಸ್, ಶಾರ್ಟ್ ಲೆಂತ್ ಟಿ ಶರ್ಟ್ ಇವನ್ನೆಲ್ಲ ನಿಷೇಧಿಸಲಾಗಿದೆ.

ಆದ್ರೆ 18 ವರ್ಷದೊಳಗಿನವರು ಫುಲ್ ಲೆಂತ್ ಗೌನ್ ಗಳನ್ನು ಧರಿಸಿ ದೇವಾಲಯಕ್ಕೆ ಬರಲು ಅವಕಾಶವಿದೆ. ಭಕ್ತರು ಭಾರತೀಯ ಸಂಸ್ಕೃತಿಯನ್ನು ಅನುಸರಿಸಬೇಕೆಂಬ ಕಾರಣಕ್ಕೆ ಈ ನಿಯಮ ಜಾರಿ ಮಾಡಿರುವುದಾಗಿ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...