alex Certify
ಕನ್ನಡ ದುನಿಯಾ       Mobile App
       

Kannada Duniya

ಉರುಳಿತು ಎತ್ತರದ ರಥ, ತಪ್ಪಿತು ಭಾರೀ ಅನಾಹುತ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 75 ಅಡಿ ಎತ್ತರದ ರಥ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ನಾರಾಯಣಘಟ್ಟದಿಂದ ತೇರನ್ನು ಎಳೆದು ತರುವಾಗ ಆಯತಪ್ಪಿದ್ದು, ಪಕ್ಕಕ್ಕೆ ಉರುಳಿದೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಭಕ್ತರೆಲ್ಲಾ ಪಾರಾಗಿದ್ದಾರೆ.

ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಹೆಚ್ಚಿನ ಭಕ್ತರು ಬರುತ್ತಾರೆ. ಸುತ್ತಲಿನ ಗ್ರಾಮಗಳಿಂದ ತೇರುಗಳನ್ನು ತರಲಾಗುತ್ತದೆ. ನಾರಾಯಣಘಟ್ಟದಿಂದ ಆಗಮಿಸುತ್ತಿದ್ದ ತೇರು ಆಯತಪ್ಪಿದೆ. ಎತ್ತುಗಳ ಸಹಾಯದಿಂದ ತೇರನ್ನು ಎಳೆದು ತರುವಾಗ ಪಲ್ಟಿಯಾಗಿ, ವಿದ್ಯುತ್ ತಂತಿಯ ಕಡೆಗೆ ವಾಲಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...