alex Certify
ಕನ್ನಡ ದುನಿಯಾ       Mobile App
       

Kannada Duniya

ಗವಿ ಗಂಗಾಧರೇಶ್ವರನ ಸ್ಪರ್ಶಿಸಿದ ಸೂರ್ಯ ರಶ್ಮಿ

gavi

ಬೆಂಗಳೂರು: ಬೆಂಗಳೂರಿನ ಗವಿಪುರಂನಲ್ಲಿರುವ, ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಬೆಳಕಿನ ವಿಸ್ಮಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಮಕರ ಸಂಕ್ರಾಂತಿಯಂದು ಪಥವನ್ನು ಬದಲಿಸುವ ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸುತ್ತವೆ.

ಪ್ರತಿವರ್ಷ ನಡೆಯುವ ಈ ಕೌತುಕವನ್ನು ನೋಡಲು ಅಪಾರ ಭಕ್ತರು ಆಗಮಿಸಿದ್ದರು. ಸಂಜೆ 5.19 ರ ಸುಮಾರಿಗೆ ದೇವಾಲಯವನ್ನು ಪ್ರವೇಶಿಸಿ ಸೂರ್ಯ ರಶ್ಮಿ ನಂದಿಯ ಮೂಲಕ ಹಾದು, ಶಿವಲಿಂಗವನ್ನು ಸ್ಪರ್ಶಿಸಿದೆ. ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು.

ದೊಡ್ಡದಾದ ಎಲ್.ಇ.ಡಿ. ಪರದೆಗಳನ್ನು ಅಳವಡಿಸಲಾಗಿತ್ತು. ಹೆಚ್ಚಿನ ಭಕ್ತರು ಆಗಮಿಸಿದ್ದ ಹಿನ್ನಲೆಯಲ್ಲಿ ದೇವಾಲಯ ಆಡಳಿತ ಮಂಡಳಿಯಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...