alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಮಾರಾಟಕ್ಕೆ ಮುಂದಾಗಿದ್ದೇ ಮುಳುವಾಯ್ತು ಟೆಕ್ಕಿ ಪಾಲಿಗೆ

atm_199ಕಳೆದ ವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಪಶ್ಚಿಮ ಬಂಗಾಳ ಮೂಲದ ಟೆಕ್ಕಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಆನ್ ಲೈನ್ ನಲ್ಲಿ ಟೆಕ್ಕಿ, ತಮ್ಮ ಬೈಕ್ ಮಾರಾಟದ ಜಾಹೀರಾತು ನೀಡಿದ್ದನ್ನು ನೋಡಿದವನು ಅದನ್ನು ಖರೀದಿಸುವ ನೆಪದಲ್ಲಿ ಮನೆಗೆ ಬಂದು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಸೋಹನ್ ಹವಾಲ್ದರ್ ಮೂರು ದಿನಗಳಾದರೂ ಕೆಲಸಕ್ಕೆ ಬಾರದ ಕಾರಣ ಸ್ನೇಹಿತರೊಬ್ಬರು ಆಗಸ್ಟ್ 5 ರಂದು ಅಪಾರ್ಟ್ಮೆಂಟ್ ಗೆ ಭೇಟಿ ನೀಡಿದ್ದ ವೇಳೆ ಸೋಹನ್ ಸಾವಿಗೀಡಾಗಿರುವುದು ಕಂಡು ಬಂದಿತ್ತು.

ಮೊದಲಿಗೆ ಇದೊಂದು ಸ್ವಾಭಾವಿಕ ಸಾವು ಎಂದು ಭಾವಿಸಲಾಗಿತ್ತಾದರೂ ಸೋಹನ್ ಅವರ ಬೈಕ್ ಕಾಣೆಯಾಗಿರುವುದು ಹಾಗೂ ಅವರ ಎಟಿಎಂ ಕಾರ್ಡ್ ನಿಂದ ಹಣ ಡ್ರಾ ಮಾಡಿರುವುದು ಕಂಡು ಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ನಿರುದ್ಯೋಗಿಯಾಗಿದ್ದ 30 ವರ್ಷದ ಕಾರ್ತಿಕ್ ಎಂಬಾತ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸೋಹನ್, ಆನ್ ಲೈನ್ ನಲ್ಲಿ ತಮ್ಮ ಬೈಕ್ ಮಾರಾಟದ ಜಾಹೀರಾತು ನೀಡಿದ್ದನ್ನು ನೋಡಿದ ಕಾರ್ತಿಕ್, ಬೈಕ್ ಖರೀದಿಸುವ ನೆಪದಲ್ಲಿ ಅವರನ್ನು ಸಂಪರ್ಕಿಸಿದ್ದಾನೆ.

ಆಗಸ್ಟ್ 3 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೋಹನ್ ಮನೆಗೆ ಆಗಮಿಸಿದ್ದ ಕಾರ್ತಿಕ್, ಬೈಕ್ ವ್ಯವಹಾರದ ಮಾತುಕತೆ ನಡೆಸಿದ್ದಾನೆ. ಬಳಿಕ ಇಬ್ಬರು ಕುಡಿಯಲು ಕುಳಿತಿದ್ದು, ಈ ವೇಳೆ ಸೋಹನ್ ಅವರ ಗ್ಲಾಸ್ ಗೆ ಸೈನೆಡ್ ಬೆರೆಸಿದ್ದ ಕಾರ್ತಿಕ್ ಅವರನ್ನು ಹತ್ಯೆ ಮಾಡಿದ್ದ. ಬಳಿಕ ಬೈಕ್, ಪರ್ಸ್ ತೆಗೆದುಕೊಂಡು ಪರಾರಿಯಾಗಿದ್ದ. ಅಲ್ಲದೇ ಅದೇ ದಿನ ಸಂಜೆ 27 ಸಾವಿರ ರೂಪಾಯಿಗಳನ್ನು ಎಟಿಎಂ ನಿಂದ ಡ್ರಾ ಮಾಡಿದ್ದ. ಇದೀಗ ಕಾರ್ತಿಕ್ ನನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...