alex Certify
ಕನ್ನಡ ದುನಿಯಾ       Mobile App
       

Kannada Duniya

Olx ನಲ್ಲಿ ಕಾರು ಮಾರಾಟಕ್ಕಿಟ್ಟಿದ್ದ ಟೆಕ್ಕಿ ನಾಪತ್ತೆ

ಆನ್ ಲೈನ್ ಮಾರಾಟ ಜಾಲತಾಣ Olx ನಲ್ಲಿ ತಮ್ಮ ಕಾರು ಮಾರಾಟಕ್ಕಿಟ್ಟಿದ್ದ ಟೆಕ್ಕಿಯೊಬ್ಬರು ಖರೀದಿದಾರನೆಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯನ್ನು ಭೇಟಿ ಮಾಡಲು ತೆರಳಿದ್ದು, ಇದೀಗ ನಾಪತ್ತೆಯಾಗಿದ್ದಾರಲ್ಲದೇ ಅವರ ಮೊಬೈಲ್ ಫೋನ್ ಕೂಡಾ ಸ್ವಿಚಾಫ್ ಆಗಿದೆ.

ಪಾಟ್ನಾ ಮೂಲದ 29 ವರ್ಷದ ಅಜಿತಾಬ್ ಕುಮಾರ್ ನಾಪತ್ತೆಯಾದ ಟೆಕ್ಕಿಯಾಗಿದ್ದು, ಇವರು ಬೆಂಗಳೂರಿನಲ್ಲಿರುವ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.

ಕೋಲ್ಕತ್ತಾ ಐಐಎಂ ನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದ ಅಜಿತಾಬ್ ಕುಮಾರ್ ಡಿಸೆಂಬರ್ 20 ರೊಳಗೆ 5 ಲಕ್ಷ ರೂ. ಪಾವತಿಸಬೇಕಿತ್ತೆಂದು ಹೇಳಲಾಗಿದೆ.

ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಖರೀದಿಸಿದ್ದ ತಮ್ಮ ಕಾರನ್ನು ಮಾರಾಟಕ್ಕಿಟ್ಟಿರುವುದಾಗಿ Olx ನಲ್ಲಿ ಪೋಸ್ಟ್ ಮಾಡಿದ್ದರು. ಕಳೆದ ಸೋಮವಾರ ಸಂಜೆ ಖರೀದಿದಾರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿದ್ದು, ಅವರನ್ನು ಭೇಟಿ ಮಾಡಲು ಸಂಜೆ 6-30 ರ ಸುಮಾರಿಗೆ ಅಜಿತಾಬ್ ಕುಮಾರ್ ತಮ್ಮ ಕಾರಿನಲ್ಲಿ ತೆರಳಿದ್ದರೆಂದು ಹೇಳಲಾಗಿದೆ. ಅದೇ ದಿನ 7-10 ರವರೆಗೆ ಅವರ ವಾಟ್ಸಾಪ್ ಸಕ್ರಿಯವಾಗಿದ್ದು, ಬಳಿಕ ಮೊಬೈಲ್ ಫೋನ್ ಸ್ವಿಚಾಫ್ ಆಗಿದೆ. ಟೆಕ್ಕಿ ನಾಪತ್ತೆ ಸಂಬಂಧ ದೂರು ದಾಖಲಿಸಲಾಗಿದ್ದು, ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...