alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರ್ಯರಶ್ಮಿಯ ಕೌತುಕ ಕಣ್ತುಂಬಿಕೊಂಡ ಭಕ್ತರು

ಬೆಂಗಳೂರು: ಬೆಂಗಳೂರು ಗವೀಪುರಂನಲ್ಲಿರುವ ಶ್ರೀ ಗವಿಗಂಗಾಧರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಬೆಳಕಿನ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಮಕರ ಸಂಕ್ರಾಂತಿ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.

ಸಂಜೆ ಸೂರ್ಯ ರಶ್ಮಿ ದೇವಾಲಯವನ್ನು ಪ್ರವೇಶಿಸಿ ನಂದಿಯ ಮೂಲಕ ಹಾದು ಶಿವಲಿಂಗವನ್ನು ಸ್ಪರ್ಶಿಸಿದೆ. ಈ ವಿಸ್ಮಯವನ್ನು ಅಪಾರ ಸಂಖ್ಯೆಯ ಭಕ್ತರು ವೀಕ್ಷಿಸಿದ್ದಾರೆ.

ದೇವಾಲಯದ ಹೊರಗೆ ದೊಡ್ಡ ಗಾತ್ರದ ಎಲ್.ಇ.ಡಿ. ಪರದೆ ಮೂಲಕ ಬೆಳಕಿನ ಕೌತುಕವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಸೂರ್ಯ ಮಕರ ಸಂಕ್ರಾಂತಿಯಂದು ಪಥವನ್ನು ಬದಲಿಸುತ್ತಾನೆ. ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರನನ್ನು ಈ ದಿನ ಸ್ಪರ್ಶಿಸುತ್ತವೆ.

ಅಂತೆಯೇ ಇಂದು ದೇವಾಲಯವನ್ನು ಪ್ರವೇಶಿಸಿದ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿವೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...