alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಾಟವಾಡಲು ಹೋಗಿ ಪ್ರಾಣವೇ ಹೋಯ್ತು

A palm

ಬೆಂಗಳೂರು: ಹುಡುಗಾಟವಾಡಲು ಹೋದ ವಿದ್ಯಾರ್ಥಿನಿ, ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ಬಾಪೂಜಿ ನಗರದಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜೊಂದರಲ್ಲಿ ಪಿ.ಯು.ಸಿ. ಓದುತ್ತಿದ್ದ ವಿದ್ಯಾರ್ಥಿನಿ, ಮನೆಯವರನ್ನು ಹೆದರಿಸಲು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ದುರದೃಷ್ಟವಶಾತ್ ನೇಣು ಕುಣಿಕೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಪ್ರತಿ ದಿನ ಕಾಲೇಜಿನಿಂದ ತಡವಾಗಿ ಬಂದಿದ್ದಕ್ಕೆ ಮನೆಯಲ್ಲಿ ಪೋಷಕರು ಬೈದಾಡಿದ್ದಾರೆ. ಇದರಿಂದ ಸಿಟ್ಟಾದ ವಿದ್ಯಾರ್ಥಿನಿ ಪೋಷಕರನ್ನು ಹೆದರಿಸಲು ನೇಣು ಹಾಕಿಕೊಂಡಿದ್ದು, ಆಕೆಯ ತಂದೆ ನೇಣು ಕುಣಿಕೆಯಿಂದ ಕೆಳಕ್ಕೆ ಇಳಿಸಿದ್ದಾರೆ.

ಆದರೆ, ಅಷ್ಟರಲ್ಲಾಗಲೇ ವಿದ್ಯಾರ್ಥಿನಿ ಪ್ರಾಣ ಹಾರಿ ಹೋಗಿತ್ತು ಎನ್ನಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...