alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ನಿವಾಸಿಗಳಿಗೆ ಶಾಕಿಂಗ್ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಜನತೆಗೆ ಆಘಾತಕಾರಿ ಸುದ್ದಿ ಇಲ್ಲಿದೆ. ನೀರಿನ ತೀವ್ರ ಕೊರತೆ ಎದುರಾಗಲಿರುವ ವಿಶ್ವದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 2 ನೇ ಸ್ಥಾನದಲ್ಲಿದೆ.

ವಿಶ್ವಸಂಸ್ಥೆ ಮತ್ತು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನಡೆಸಿದ ಅಧ್ಯಯನವನ್ನು ಆಧರಿಸಿ ಬಿ.ಬಿ.ಸಿ. ನ್ಯೂಸ್ ವರದಿ ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾದ ಬಂದರು ನಗರ ಕೇಪ್ ಟೌನ್ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಮಹಾನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು, ಬ್ರೆಜಿಲ್ ನ ಸಾವೊಪೊಲೊ, ಚೀನಾದ ಬೀಜಿಂಗ್, ಈಜಿಪ್ಟ್ ನ ಕೈರೋ, ಇಂಡೋನೇಷ್ಯಾದ ಜಕಾರ್ತಾ, ರಷ್ಯಾದ ಮಾಸ್ಕೋ, ಟರ್ಕಿಯ ಇಸ್ತಾಂಬುಲ್, ಮೆಕ್ಸಿಕೊ ಸಿಟಿ ಹಾಗೂ ಲಂಡನ್ ನಗರಗಳು ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ನಗರಗಳ ಪಟ್ಟಿಯಲ್ಲಿವೆ.

ಬೆಂಗಳೂರಿನಲ್ಲಿ ಕೆರೆಗಳ ಕಣ್ಮರೆ, ಜಲಮಾಲಿನ್ಯದ ಕಾರಣದಿಂದ ನೀರಿನ ಕೊರತೆ ಜಾಸ್ತಿಯಾಗಲಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯುವುದಿರಲಿ, ದಿನಬಳಕೆಗೂ ಬರುವುದಿಲ್ಲ ಎಂದು ಹೇಳಲಾಗಿದೆ. ಬೆಂಗಳೂರು ನಿಯಂತ್ರಣಕ್ಕೆ ಸಿಗದಂತೆ ಬೆಳೆಯುತ್ತಿದೆ. ಮಾತ್ರವಲ್ಲ ಶೇ. 50 ರಷ್ಟು ನೀರು ಪೋಲಾಗುತ್ತಿದೆ. ನೀರಿನ ಕೊರತೆ ತೀವ್ರತರವಾಗಿ 2025 ರ ವೇಳೆಗೆ ಬೆಂಗಳೂರು ಜನ ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...