alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಪಾಠಿಗಳಿಂದಲೇ ರ್ಯಾಗಿಂಗ್! ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ರ್ಯಾಗಿಂಗ್ ನಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

19 ವರ್ಷದ ಮೇಘನಾ ಆತ್ಮಹತ್ಯೆ ಮಾಡಿಕೊಂಡವರು. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೇಘನಾ ಓದುತ್ತಿದ್ದು, ಆಕೆಯ ಸಹಪಾಠಿಗಳೇ ರ್ಯಾಗಿಂಗ್ ಮಾಡಿದ್ದಾರೆ. ಆಕೆಯನ್ನು ಏಕಾಂಗಿ ಮಾಡಿ ಯಾರೂ ಮಾತನಾಡಿಸದೇ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದ ಮೇಘನಾ ಕೆಲವು ದಿನಗಳಿಂದ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇದ್ದರು.

ಇತ್ತೀಚೆಗೆ ಪೋಷಕರು ಕಾಲೇಜಿಗೆ ಹೋಗುವಂತೆ ಹೇಳಿದ್ದರಿಂದ ಮೇಘನಾ ಮತ್ತೆ ಕಾಲೇಜಿಗೆ ಹೋಗಿದ್ದಾರೆ. ಆದರೂ, ಸಹಪಾಠಿಗಳು ಆಕೆಯೊಂದಿಗೆ ಬೆರೆಯದ ಕಾರಣ ಮನನೊಂದು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರ್ಯಾಗಿಂಗ್ ನಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...