alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಟೀ ಫ್ಲಾಸ್ಕ್ ನಲ್ಲಿತ್ತು ನಾಗರ ಹಾವು

ಬೆಂಗಳೂರು: ಹಾವುಗಳು ಇಲ್ಲದ ಸ್ಥಳವೇ ಇಲ್ಲ ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ನೋಡಿರುತ್ತೀರಿ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೇರೋಹಳ್ಳಿಯ ಅಂದ್ರಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಟೀ ಫ್ಲಾಸ್ಕ್ ನಲ್ಲಿ ಹಾವು ಕಂಡು ಬಂದಿದೆ. ಹರೀಶ್ ಎಂಬುವವರ ಮನೆಯಲ್ಲಿ ಫ್ಲಾಸ್ಕ್ ತೊಳೆದು ಮನೆಯ ಹೊರಗೆ ಇಟ್ಟಿದ್ದು, ಅದರೊಳಗೆ ಎರಡೂವರೆ ಅಡಿ ಉದ್ದದ ನಾಗರ ಹಾವು ಸೇರಿಕೊಂಡಿದೆ.

ಇದನ್ನು ಗಮನಿಸದ ಮನೆಯವರು ಫ್ಲಾಸ್ಕ್ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ಫ್ಲಾಸ್ಕ್ ನಲ್ಲಿ ಹಾವು ಇರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದು, ಅವರು ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...