alex Certify
ಕನ್ನಡ ದುನಿಯಾ       Mobile App
       

Kannada Duniya

ಹೂವು ಖರೀದಿಸಲೆಂದು ಬಂದು ವಂಚನೆಗೊಳಗಾದ ಯುವಕ

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ವಿವಾಹ ಸಮಾರಂಭಕ್ಕಾಗಿ ಹೂಗಳನ್ನು ಖರೀದಿ ಮಾಡಲು ಬಂದಿದ್ದ ಯುವಕನ ಜೇಬಿನಲ್ಲಿದ್ದ ಹಣಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ಮಂಗಳವಾರ ಮುಂಜಾನೆ ಬೆಂಗಳೂರಿಗೆ ಬಂದಿಳಿದ ಆಂಧ್ರ ಮೂಲದ ಚಿಟ್ಟಿ ಬಾಬು ಕೆ.ಆರ್ ಮಾರ್ಕೆಟ್ ಗೆ ಹೋಗಲು ತಯಾರಾಗಿದ್ದರು.

ರಸ್ತೆಯಲ್ಲಿ ಹೋಗುವಾಗ ಆಟೋಗೆ ಕೈ ಮಾಡಿ ಕೆ.ಆರ್. ಮಾರ್ಕೆಟ್ ಗೆ ಬರುವಿರಾ ಎಂದು ಕೇಳಿದ್ದಾರೆ. ಅದಾಗಲೇ ಆ ಆಟೋದಲ್ಲಿ ಒಬ್ಬ ಮಹಿಳೆ ಇದ್ದರು. ಆದ್ರೂ, ಆಟೋ ಡ್ರೈವರ್ ಹತ್ತಿಸಿಕೊಂಡಿದ್ದಾನೆ. ಕೊಂಚ ದೂರ ಹೋಗುವಷ್ಟರಲ್ಲಿ ಇನ್ನೋರ್ವ ಮಹಿಳೆ ಆಟೋ ಹತ್ತಿದ್ದಾಳೆ. ಆಗ ಕೆ.ಆರ್. ಮಾರ್ಕೆಟ್ ಗೆ ಹೋಗುವ ದಾರಿಯನ್ನು ಬದಲಿಸಿದ ಆಟೋ ಚಾಲಕ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿದ್ದಾನೆ.

ಚಿಟ್ಟಿಬಾಬುಗೆ ಚಾಕು ತೋರಿಸಿ ಹಣವನ್ನು ನೀಡುವಂತೆ ಮಹಿಳೆಯರು ಹಾಗೂ ಆಟೋ ಚಾಲಕ ಬೆದರಿಕೆ ಹಾಕಿದ್ದಾರೆ. ಆ ಸ್ಥಳಕ್ಕೆ ಮತ್ತೆ ಮೂವರು ಬಂದಿದ್ದು, ಎಲ್ಲರೂ ಸೇರಿ ಚಿಟ್ಟಿಬಾಬುವನ್ನು ಹೆದರಿಸಿ 40 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...