alex Certify
ಕನ್ನಡ ದುನಿಯಾ       Mobile App
       

Kannada Duniya

ಖಾರದ ಪುಡಿ ಎರಚಿ ದೇವಾಲಯದಲ್ಲಿ ದರೋಡೆ

rober-beng

ಬೆಂಗಳೂರು: ಬೆಂಗಳೂರಿನ ಶ್ರೀನಿವಾಸ ನಗರದಲ್ಲಿ ದೇವಾಲಯದ ಅರ್ಚಕನ ಮೇಲೆ ಖಾರದ ಪುಡಿ ಎರಚಿ ದರೋಡೆ ಮಾಡಲಾಗಿದೆ.

ಪುರಾತನ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಾಲಯದಲ್ಲಿ ಇಬ್ಬರು ದುಷ್ಕರ್ಮಿಗಳು, ಅರ್ಚಕ ಮಂಜುನಾಥ್ ಮೇಲೆ ಖಾರದ ಪುಡಿ ಎರಚಿ, ವಿಗ್ರಹದ ಮೇಲಿದ್ದ 50 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ.

ಮಂಜುನಾಥ್ ಬೆಳಿಗ್ಗೆ ದೇವಾಲಯದ ಬಾಗಿಲು ತೆಗೆದಾಗ ಇಬ್ಬರು ದುಷ್ಕರ್ಮಿಗಳು ಬಂದಿದ್ದು, ಒಬ್ಬ ಇವರ ಬಳಿ ಮಾತನಾಡುತ್ತಾ ನಿಂತಿದ್ದಾನೆ.

ಮತ್ತೊಬ್ಬ ಗರ್ಭಗುಡಿಯೊಳಗೆ ಪ್ರವೇಶಿಸಿ ವಿಗ್ರಹದ ಮೇಲಿದ್ದ ಚಿನ್ನದ ಸರ ತೆಗೆದುಕೊಂಡಿದ್ದಾನೆ. ಮಂಜುನಾಥ್ ತಡೆಯಲು ಯತ್ನಿಸಿದಾಗ, ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.

ಮಂಜುನಾಥ್ ಕೂಗಿಕೊಂಡಿದ್ದು, ಸ್ಥಳೀಯರು ಬರುವಷ್ಟರಲ್ಲಿ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದರೆನ್ನಲಾಗಿದೆ. ಸ್ಥಳಕ್ಕೆ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...