alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಘರ್ಜಿಸಿದ ಜೆಸಿಬಿಗಳು

bengaluru rajakaluve encroachmentಕೆರೆ ಹಾಗೂ ರಾಜ ಕಾಲುವೆ ಒತ್ತುವರಿ ತೆರವಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಇಂದು ಬೆಳಿಗ್ಗೆಯಿಂದಲೇ ಜೆಸಿಬಿಗಳ ಘರ್ಜನೆ ಆರಂಭವಾಗಿದೆ. ಇನ್ನೂ ಗೃಹ ಪ್ರವೇಶ ಆಗದಿರುವ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧರೆಗುರುಳುತ್ತಿವೆ.

ಬೆಂಗಳೂರು ಮಹಾನಗರದಲ್ಲಿ ಸ್ವಂತದೊಂದು ಸೂರು ಕಟ್ಟಿಕೊಂಡಿದ್ದ ಆನೇಕ ಮಂದಿ, ತಮ್ಮ ಕಣ್ಣ ಮುಂದೆಯೇ ಕನಸಿನ ಮನೆ ಉರುಳಿ ಬೀಳುತ್ತಿರುವುದನ್ನು ಕಂಡು ಆಘಾತಗೊಂಡಿದ್ದು, ಅವರುಗಳ ಆಕ್ರಂದನ ಮುಗಿಲು ಮುಟ್ಟಿದೆ.

ಈ ಮಧ್ಯೆ ಕಟ್ಟಡ ಕಳೆದುಕೊಳ್ಳುವ ಭೀತಿಯಲ್ಲಿರುವ ಹಲವರು, ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದರೂ ತಕ್ಷಣಕ್ಕೆ ಸ್ಟೇ ಸಿಗುವುದು ಕಷ್ಟವೆನ್ನಲಾಗಿದೆ. ಹೀಗಾಗಿ ಬಿಗಿ ಪೊಲೀಸ್ ರಕ್ಷಣೆಯಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬಿಬಿಎಂಪಿ ಅಧಿಕಾರಿಗಳೇ ಮನೆ ಪ್ಲಾನ್ ಅನುಮೋದಿಸಿದ್ದು, ಇದೀಗ ರಾಜ ಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ತೆರವುಗೊಳಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತೆರವು ಕಾರ್ಯಾಚರಣೆಯಿಂದ ನೂರಾರು ಕುಟುಂಬಗಳು ಬೀದಿ ಪಾಲಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...