alex Certify
ಕನ್ನಡ ದುನಿಯಾ       Mobile App
       

Kannada Duniya

ರಾಸಲೀಲೆ ಸ್ವಾಮಿ ವಿರುದ್ಧ ಆಹೋರಾತ್ರಿ ಧರಣಿ

ಬೆಂಗಳೂರು: ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್, ಮಠದಲ್ಲಿಯೇ ರಾಸಲೀಲೆ ನಡೆಸಿದ ವಿಡಿಯೋ ಬಹಿರಂಗವಾಗಿ ಭಕ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ದಯಾನಂದ, ಹಿರಿಯ ಸ್ವಾಮೀಜಿ ಹಾಗೂ ಅವರ ಕುಟುಂಬದವರನ್ನು ಮಠದಿಂದ ಹೊರ ಹಾಕಬೇಕೆಂದು ಒತ್ತಾಯಿಸಿ, ಸಮಾಜದ ಮುಖಂಡರು ಹಾಗೂ ಭಕ್ತರು ಆಹೋರಾತ್ರಿ ಧರಣಿ ನಡೆಸಿದ್ದಾರೆ.

ಮಠದ ಬಳಿಯಲ್ಲೇ ಧರಣಿ ನಡೆಸಿದ್ದು, ಕಪಟಿ ಸ್ವಾಮೀಜಿಯನ್ನು ಹೊರ ಹಾಕಿ ಬೇರೆಯವರನ್ನು ನಿಯೋಜಿಸಬೇಕು. ಮೊದಲು ಪರಾರಿಯಾದ ದಯಾನಂದನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ನಡುವೆ ಮಠದ ಆಸ್ತಿಯನ್ನು ಕಬಳಿಸಲು ಮುಂದಾಗಿರುವ ಕೆಲವರು ಸ್ವಾಮೀಜಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭಕ್ತರು ಹೋರಾಟ ಮುಂದುವರೆಸಿದ್ದು, ಮಠದ ಪರಂಪರೆಗೆ ಮಸಿ ಬಳಿದಿರುವ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...