alex Certify
ಕನ್ನಡ ದುನಿಯಾ       Mobile App
       

Kannada Duniya

42 ಬಸ್ ಗಳು ಭಸ್ಮವಾಗಲು ಕಾರಣವಾಗಿದ್ದು ಮಹಿಳೆ

bus firingತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದವರಿಗೆ ಸೇರಿದ್ದ ಕೆ.ಪಿ.ಎನ್. ಟ್ರಾವೆಲ್ಸ್ ಗೆ ಸೇರಿದ್ದ ಬಸ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಡಿಸೋಜಾ ನಗರದಲ್ಲಿರುವ ಡಿಪೋದಲ್ಲಿ ಬಸ್ ನಿಂತಿದ್ದ ವೇಳೆ 40 ಲಕ್ಸುರಿ ಬಸ್ ಹಾಗೂ 2 ಮಿನಿ ಬಸ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಸುಟ್ಟು ಸಂಪೂರ್ಣ ಭಸ್ಮವಾಗಿದ್ದವು.

ಘಟನೆ ನಡೆದ ಸಂದರ್ಭದಲ್ಲಿ ಡಿಪೋದಲ್ಲಿದ್ದ ಕೆ.ಪಿ.ಎನ್. ಟ್ರಾವೆಲ್ಸ್ ನ ಕೆಲ ಚಾಲಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಏಳು ಮಂದಿ ಯುವಕರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.

ಅಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬಳು, ಬಸ್ ಗಳಿಗೆ ಬೆಂಕಿ ಹಚ್ಚುವಂತೆ ಗುಂಪನ್ನು ಪ್ರಚೋದಿಸುತ್ತಿದ್ದಳೆನ್ನಲಾಗಿದ್ದು, ಯುವಕರಿಗೆ ಆಕೆ ಪರಿಚಿತಳಲ್ಲವಾದರೂ ಆಕೆಯ ಮಾತಿನಿಂದ ಪ್ರೇರೇಪಿತರಾಗಿ ಬೆಂಕಿ ಹಚ್ಚಿದ ಕಾರಣ ಈಗ ಜೈಲು ಪಾಲಾಗುವಂತಾಗಿದೆ. ಇನ್ನೂ ಹಲವರು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದು, ಅವರುಗಳ ಪತ್ತೆ ಕಾರ್ಯಕ್ಕೆ ಮುಂದಾಗಿರುವ ಪೊಲೀಸರು ಇವರುಗಳಿಗೆ ಪ್ರಚೋದಿಸಿದ ಮಹಿಳೆಯನ್ನೂ ಬಂಧಿಸಲು ಮುಂದಾಗಿದ್ದಾರೆ. ಸುಟ್ಟು ಕರಕಲಾದ ಬಸ್ ಗಳು ಕರ್ನಾಟಕದಲ್ಲಿ ನೋಂದಣಿಯಾಗಿದ್ದು, ಉದ್ಯಮದಲ್ಲಿನ ಪೈಪೋಟಿಯೂ ಈ ಕೃತ್ಯಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...