alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯರ ಎದುರಲ್ಲೇ ಒಳ ಉಡುಪು ಮೂಸಿದ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಬ್ಬ ಸೈಕೋಪಾತ್ ಕಂಡು ಬಂದಿದ್ದಾನೆ. 8 ತಿಂಗಳ ಹಿಂದೆ ಮಹಾರಾಣಿ ಕಾಲೇಜಿನಲ್ಲಿ ತಡರಾತ್ರಿ ಹುಡುಗಿಯರ ಒಳ ಉಡುಪು ಧರಿಸಿ ಓಡಾಡಿದ್ದು ಸುದ್ದಿಯಾಗಿ ಆತಂಕಕ್ಕೆ ಕಾರಣವಾಗಿತ್ತು.

ಅದೇ ರೀತಿಯ ಘಟನೆ ಡಿಸೆಂಬರ್ 10 ರಂದು ಬೈಯಪ್ಪನಹಳ್ಳಿಯ ಬಿ.ಎಂ.ಆರ್.ಸಿ.ಎಲ್. ಕ್ವಾಟ್ರಸ್ ನಲ್ಲಿ ನಡೆದಿದೆ.

ಮೆಟ್ರೋ ಚಾಲಕಿಯರು ಮಲಗಿದ್ದ ಸ್ಥಳಕ್ಕೆ ನುಗ್ಗಿದ ಸೈಕೋಪಾತ್, ಚಾಕು ಹಿಡಿದು ಮಲಗಿದ್ದ ಯುವತಿಯರ ಮಗ್ಗುಲಲ್ಲೇ ಕೆಲ ಕಾಲ ಕುಳಿತಿದ್ದಾನೆ.

ಸುಮಾರು 25 ವರ್ಷದ ಯುವಕ, ಚಾಕು ಹಿಡಿದು ಮಗ್ಗುಲ್ಲೇ ಕುಳಿತುಕೊಂಡಿರುವುದನ್ನು ಎಚ್ಚರಗೊಂಡ ಯುವತಿಯರು ಕಂಡ ಕಿರುಚಾಡಿದ್ದಾರೆ. ಆತ ಚಾಕು ತೋರಿಸಿ ಬೆದರಿಸಿದ್ದು, ಬಾಲ್ಕನಿಗೆ ಹೋಗಿ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ತಂದು ಇದು ನಿನ್ನದೇ, ನಿನ್ನದೇ ಎಂದು ಯುವತಿಯರಿಗೆ ಕೇಳಿದ್ದಾನೆ. ಅವುಗಳನ್ನು ಮೂಸಿ ನೋಡಿ ಕೆಳಗೆ ಎಸೆದಿದ್ದಾನೆ. ಮನೆ ಬಿಟ್ಟು ಬಂದಿದ್ದೇನೆ ಎಂದು ಏನೇನೋ ಹೇಳಿ ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಭಯಭೀತರಾದ ಚಾಲಕಿಯರು ಸೆಕ್ಯೂರಿಟಿ ಗಾರ್ಡ್ ನನ್ನು ಕರೆದುಕೊಂಡು ಬಂದು ನೋಡಿದಾಗ, ಮನೆಯೊಳಗೆ ಮೊದಲೇ ಬಂದಿದ್ದ ಸೈಕೋಪಾತ್ ಅಲ್ಲೇ ಸಿಗರೇಟ್ ಸೇದಿ ಉಗುಳಿರುವುದು ಕಂಡಿದೆ. ಯುವತಿಯರು ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಕೋಪಾತ್ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...