alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ನಡೆದಿದೆ ಮತ್ತೊಂದು ಆಘಾತಕಾರಿ ಘಟನೆ

ಬೆಂಗಳೂರು: ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಬಂದೂಕು ದೋಚಿದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಟಾಟಾ ನಗರದಲ್ಲಿ ನಡೆದಿದೆ.

ಪೊಲೀಸರಾದ ಪರಮೇಶ್ವರ್ ಹಾಗೂ ಸಿದ್ಧಪ್ಪ ಅವರ ಮೇಲೆ ಐವರು ದುಷ್ಕರ್ಮಿಗಳು ಹಲ್ಲೆ ನಡೆಸಿ, ಬಂದೂಕು ಕಸಿದು ಪರಾರಿಯಾಗಿದ್ದಾರೆ.

ರಸ್ತೆಯಲ್ಲಿ ಕುಡಿದು ಅನುಚಿತವಾಗಿ ವರ್ತಿಸುತ್ತಿದ್ದವರಿಗೆ ಸ್ಥಳದಿಂದ ತೆರಳುವಂತೆ ಗಸ್ತಿನಲ್ಲಿದ್ದ ಪರಮೇಶ್ವರ್, ಸಿದ್ಧಪ್ಪ ಅವರು ಸೂಚಿಸಿದ್ದಾರೆ. ಆಗ, ದುಷ್ಕರ್ಮಿಗಳು ಹಲ್ಲೆ ನಡೆಸಿ ಬಂದೂಕು ಕಸಿದು ಪರಾರಿಯಾಗಿದ್ದಾರೆ.

ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿ.ಎಸ್.ಐ. ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಜೆ.ಜೆ. ನಗರ ಠಾಣೆ ಪ್ಯಾಪ್ತಿಯಲ್ಲಿ ಗಾಂಜಾ ಮತ್ತಿನಲ್ಲಿದ್ದ ಕಿಡಿಗೇಡಿಗಳು ಪೇದೆ ಮೇಲೆ ಮಾರಕಾಸ್ತ್ರಗಳಿಂದ ಥಳಿಸಿದ್ದರು. ಇದೀಗ ಹಲ್ಲೆ ನಡೆಸಿ ಗನ್ ಕಸಿದು ಪರಾರಿಯಾಗಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...