alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಸ್ಥಳದಲ್ಲೇ ಬೆತ್ತಲಾಗಿ ಅನುಚಿತ ವರ್ತನೆ

argue

ಬೆಂಗಳೂರು: ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ, ಪೊಲೀಸರ ಎದುರಿನಲ್ಲೇ, ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೆಬ್ಬಾಳದ ನಿವಾಸಿ ಹೀಗೆ ಅನುಚಿತವಾಗಿ ವರ್ತಿಸಿದವ. ಆರ್.ಟಿ. ನಗರದ ಗಂಗಾನಗರದಲ್ಲಿ ಈ ಘಟನೆ ನಡೆದಿದೆ. ಆರ್.ಟಿ. ನಗರ ಸಂಚಾರ ಠಾಣೆ ಪೊಲೀಸರು, ಗಂಗಾನಗರದ ಸಿ.ಬಿ.ಐ. ಜಂಕ್ಷನ್ ಬಳಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಆಟೋ ಒಂದನ್ನು ತಡೆದು ಚಾಲಕನ ಬಳಿ ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ.

ಚಾಲಕ ನೀಡಿದ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಅದೇ ಆಟೋದಲ್ಲಿ ಕುಳಿತಿದ್ದ ಹೆಬ್ಬಾಳದ ವ್ಯಕ್ತಿ, ಏಕಾಏಕಿ ಪೊಲೀಸರೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ರಸ್ತೆಗೆ ಇಳಿದು ಬಟ್ಟೆ ಬಿಚ್ಚಿದ್ದಲ್ಲದೇ, ಅವಾಂತರ ಸೃಷ್ಠಿಸಿದ್ದಾನೆ.

ಈತನ ವರ್ತನೆಯಿಂದ ಬೇಸತ್ತ ಪೊಲೀಸರು, ಹೊಯ್ಸಳ ವಾಹನದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಆತನನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಕಳುಹಿಸಿದ್ದಾರೆ. ಈ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...