alex Certify
ಕನ್ನಡ ದುನಿಯಾ       Mobile App
       

Kannada Duniya

ವಂಚನೆ ಪ್ರಕರಣದಲ್ಲಿ ಕಿಯೋನಿಕ್ಸ್ ಅಧಿಕಾರಿ ಅರೆಸ್ಟ್

ಬೆಂಗಳೂರು: ಬಡವರಿಗೆ ಮನೆ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ್ದ ಕಿಯೋನಿಕ್ಸ್ ಅಧಿಕಾರಿಯೊಬ್ಬರನ್ನು ಹೆಚ್.ಎ.ಎಲ್. ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಿಯೋನಿಕ್ಸ್ ದಕ್ಷಿಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿ ಬಂಧಿತ ಆರೋಪಿ. ಈತ ಸುಮಾರು 20 ಮಂದಿಯಿಂದ 10 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಕೇಳಿ ಬಂದಿದೆ.

ಕೊಟ್ಟ ಹಣ ವಾಪಸ್ ಕೇಳಿದವರ ವಿರುದ್ಧವೇ ಕಂಪ್ಲೆಂಟ್ ಕೊಡುತ್ತಿದ್ದ ಕಾರಣ, ಈತನ ಬಗ್ಗೆ ದೂರು ನೀಡಲು ಹಣ ಕಳೆದುಕೊಂಡವರು ಹಿಂದೇಟು ಹಾಕಿದ್ದಾರೆ.

ಬಡವರಿಗೆ ಮನೆ ಹೆಸರಲ್ಲಿ ವಂಚಿಸಿದ್ದ ಆರೋಪಿ, ಕೆಲವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರನ್ನೂ ವಂಚಿಸಿದ್ದಾನೆ ಎನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...