alex Certify
ಕನ್ನಡ ದುನಿಯಾ       Mobile App
       

Kannada Duniya

83 ಲಕ್ಷ ರೂ. ಹಳೆ ನೋಟು ವಶ

500-rs-note-ee

ಬೆಂಗಳೂರು: ಕಳೆದ ವರ್ಷ ನವೆಂಬರ್ ನಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಲಾಗಿತ್ತು.

ಹಳೆ ನೋಟ್ ವಿನಿಮಯಕ್ಕೆ ನೀಡಿದ್ದ ಕಾಲಾವಧಿ ಮುಕ್ತಾಯವಾಗಿದ್ದು, ಇಂತಹ 10 ಕ್ಕಿಂತ ಹೆಚ್ಚಿನ ನೋಟುಗಳನ್ನು ಹೊಂದುವುದನ್ನು ಕೂಡ ನಿಷೇಧಿಸಲಾಗಿದೆ.

ಹೀಗಿದ್ದರೂ, ನೋಟ್ ವಿನಿಮಯ ದಂಧೆ ಅವ್ಯಾಹತವಾಗಿ ನಡೆದಿದೆ. ಅಂತಹ ಮತ್ತೊಂದು ಪ್ರಕರಣವನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ.

ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿರುವ ಬಸವೇಶ್ವರ ಠಾಣೆ ಪೊಲೀಸರು, 83 ಲಕ್ಷ ರೂ ಹಾಗೂ ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಭಾಸ್ಕರ್ ಬಂಧಿತ ಆರೋಪಿ. ಶ್ರೀನಾಥ್ ಹಾಗೂ ಹೇಮಂತ್ ಎಂಬುವವರು ಪರಾರಿಯಾಗಿದ್ದಾರೆ. ನೋಟ್ ವಿನಿಮಯ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...