alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲೇ ನೈಜೀರಿಯನ್ ಯುವತಿಯ ರಂಪಾಟ

ಬೆಂಗಳೂರು: ರಾಜಧಾನಿಯಲ್ಲಿ ನೈಜೀರಿಯನ್ ಪ್ರಜೆಗಳ ಪುಂಡಾಟ ಮುಂದುವರೆದಿದೆ. ಬೆಂಗಳೂರು ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈಜೀರಿಯಾದ ಯುವತಿಯೊಬ್ಬಳು ಅನುಚಿತವಾಗಿ ವರ್ತಿಸಿದ್ದಾಳೆ.

ಪೊಲೀಸ್ ಪೇದೆಯೊಂದಿಗೆ ವಾಗ್ವಾದಕ್ಕೆ ಇಳಿದ ಯುವತಿ ಜಗಳವಾಡುತ್ತಾ ಪೊಲೀಸ್ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾಳೆ.

3 ದಿನಗಳ ಹಿಂದೆ ರಸ್ತೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಯುವತಿಗೆ, ಸ್ಥಳದಿಂದ ತೆರಳುವಂತೆ ಪೇದೆ ಆನಂದ್ ಸೂಚಿಸಿದ್ದು, ಇದಕ್ಕೆ ಆಕ್ರೋಶಗೊಂಡ ಯುವತಿ ಆನಂದ್ ಕೆನ್ನೆಗೆ ಹೊಡೆದಿದ್ದಾಳೆ ಎಂದು ಹೇಳಲಾಗಿದೆ.

ಯುವತಿಯನ್ನು ವಶಕ್ಕೆ ಪಡೆದ ಕೆ.ಜಿ. ಹಳ್ಳಿ ಠಾಣೆ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...