alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು: ಇನ್ನು ರಾಜ್ಯ ರಾಜಧಾನಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ರೈಲಲ್ಲಿ ತೆರಳಲು ಮೂರು ಗಂಟೆ ಬೇಕಿಲ್ಲ. ಬೆಂಗಳೂರು-ಮೈಸೂರು ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗ ಹೆಚ್ಚಿಸಲಾಗಿದೆ. ನೂತನ ಅವಧಿ ಮೂರು ಗಂಟೆಯಿಂದ 2.30 ಗಂಟೆಗೆ ಇಳಿಕೆಯಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಯಶವಂತಪುರ-ಮೈಸೂರು, ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ(ಕೆಎಸ್‌ಆರ್‌)-ಮೈಸೂರು, ಕಣ್ಣೂರು/ಕಾರವಾರ- ಬೆಂಗಳೂರು ಕೆಎಸ್‌ಆರ್‌, ಮೈಲಾಡುದುರೈ-ಮೈಸೂರು, ಮೈಸೂರು- ಸಾಯಿನಗರ ಶಿರಡಿ ಹಾಗೂ ಇದೇ ರೈಲುಗಳ ಹಿಂದಿರುಗುವ ಪ್ರಯಾಣಗಳ ರೈಲುಗಳ ವೇಗವೂ ಹೆಚ್ಚಿಸಲಾಗಿದೆ.

ಬೆಂಗಳೂರು-ಜೋಲಾರ್‌ಪೇಟೆ ನಡುವಿನ ರೈಲು ಓಡಾಟವನ್ನು ಹೊರತುಪಡಿಸಿದರೆ, ಬೆಂಗಳೂರು – ಮೈಸೂರು ಭಾಗಕ್ಕೆ ಅತ್ಯಂತ ಹೆಚ್ಚು ರೈಲುಗಳನ್ನು ನಿಯೋಜಿಸಲಾಗಿದೆ. ಪ್ಯಾಸೆಂಜರ್‌, ಎಕ್ಸ್‌ಪ್ರೆಸ್‌ ಹಾಗೂ ಸೂಪರ್‌ಫಾಸ್ಟ್‌ ರೈಲುಗಳು ಈ ನಗರಗಳ ನಡುವೆ ಸಂಚಾರ ಮಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...