alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ವಿಡಿಯೊ ವೈರಲ್: ಸ್ವಾಮೀಜಿ ನಾಪತ್ತೆ

ಬೆಂಗಳೂರು: ಬೆಂಗಳೂರಿನ ಮದ್ದೇವಣಾಪುರದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿ ಪುತ್ರನ ರಾಸಲೀಲೆ ಪ್ರಕರಣ ಬಯಲಾಗಿದ್ದು, ಮಠದ ಬಳಿ ಭಕ್ತರು, ಸಮಾಜದ ಮುಖಂಡರು ನೆರೆದಿದ್ದಾರೆ.

ನಟಿಯೊಂದಿಗೆ ಸ್ವಾಮೀಜಿ ಪುತ್ರ ನಡೆಸಿದ್ದ ರಾಸಲೀಲೆ ವಿಡಿಯೋ ಬಹಿರಂಗವಾಗ್ತಿದ್ದಂತೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂಸಾರಿಯಾಗಿರುವ ಸ್ವಾಮೀಜಿ ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ. ವಿರೋಧದ ನಡುವೆಯೂ ತನ್ನ ಪುತ್ರನಿಗೆ ಪಟ್ಟಾಭಿಷೇಕ ಮಾಡಲು ಮುಂದಾಗಿದ್ದಾರೆ. ಎಸ್.ಎಸ್.ಎಲ್.ಸಿ. ಫೇಲಾಗಿರುವ ಆತನಿಗೆ ಸ್ವಾಮೀಜಿಯಾಗುವ ಯಾವ ಅರ್ಹತೆಯೂ ಇಲ್ಲ ಎಂದು ಭಕ್ತರು ಹೇಳಿದ್ದಾರೆ.

ಮಠದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಸ್ವಾಮೀಜಿ ಮುಂದಾಗಿದ್ದು, ಭಕ್ತರ ವಿರೋಧದ ನಡುವೆಯೂ ನಡವಳಿಕೆ ಸರಿ ಇಲ್ಲದ ಪುತ್ರನನ್ನು ಉತ್ತರಾಧಿಕಾರಿಯಾಗಿ ನೇಮಿಸಲು ತಯಾರಿ ನಡೆಸಿದ್ದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠದ ಪರಂಪರೆಗೆ ಮತ್ತು ಸಮಾಜಕ್ಕೆ ರಾಸಲೀಲೆಯಿಂದಾಗಿ ಕೆಟ್ಟ ಹೆಸರು ಬಂದಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ವಾಮೀಜಿ ನಾಪತ್ತೆಯಾಗಿದ್ದು, ಮೊಬೈಲ್ ನಾಟ್ ರೀಚಬಲ್ ಆಗಿದೆ ಎಂದು ಹೇಳಲಾಗಿದೆ. ಮಠದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...