alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆ ಖುಷಿಯಲ್ಲಿದ್ದ ಮುನಿರತ್ನಗೆ ಮತ್ತೆ ಹಿನ್ನಡೆ

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮುನಿರತ್ನಗೆ ಹಿನ್ನಡೆಯಾಗಿದೆ.

ಮುನಿರತ್ನ ಅವರ ವಿರುದ್ಧ ಜಾಮೀನುರಹಿತ ಮೊಕದ್ದಮೆ ದಾಖಲಿಸಲು 24 ನೇ ಎ.ಸಿ.ಎಂ.ಎಂ. ಕೋರ್ಟ್ ಆದೇಶಿಸಿದೆ. ಐ.ಪಿ.ಸಿ. ಸೆಕ್ಷನ್ 420, 468, 471 ರ ಅಡಿ ತನಿಖೆಗೆ ನಿರ್ದೇಶನ ನೀಡಿದ್ದು, ವಂಚನೆ, ಫೋರ್ಜರಿ ಸೆಕ್ಷನ್ ಅಡಿ ಕೇಸ್ ದಾಖಲಿಸಲು ಕೋರ್ಟ್ ಪೋಲೀಸರಿಗೆ ಸೂಚಿಸಿದೆ.

ಜಾಲಹಳ್ಳಿ ಪೊಲೀಸರು ಜಾಮೀನು ಸಹಿತ ಕೇಸ್ ದಾಖಲಿಸಿದ್ದ ಹಿನ್ನಲೆಯಲ್ಲಿ ರಾಕೇಶ್ ಎಂಬುವವರು ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ರಹಿತ ಕೇಸ್ ದಾಖಲಿಸಲು ಸೂಚಿಸಿದೆ.

ರಾಜರಾಜೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 9000 ಮತದಾರರ ಗುರುತಿನ ಚೀಟಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಮೊದಲಿಗೆ ಇವು ನಕಲಿ ಗುರುತಿನ ಚೀಟಿ ಎನ್ನಲಾಗಿತ್ತಾದರೂ, ಅವು ಅಸಲಿ ಎಂಬುದು ಚುನಾವಣಾ ಆಯೋಗದ ತನಿಖೆಯಲ್ಲಿ ಗೊತ್ತಾಗಿತ್ತು. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಮುನಿರತ್ನ ಅವರು 11 ನೇ ಆರೋಪಿಯಾಗಿದ್ದರು. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿ ಕೇಂದ್ರ ಚುನಾವಣಾ ಆಯೋಗವೂ ಕ್ರಮ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...