alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾಧಿಕಾರಿಗಳಿಂದ 2.19 ಕೋಟಿ ರೂ. ಜಫ್ತಿ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ವಿವಿಧೆಡೆ ಅಪಾರ ಪ್ರಮಾಣದ ನಗದು ಜಫ್ತಿ ಮಾಡಿದ್ದಾರೆ.

ಬೆಂಗಳೂರಿನ ಹಲಸೂರು ಚೆಕ್ ಪೋಸ್ಟ್ ನಲ್ಲಿ ವಿವಿಧ ಬ್ಯಾಂಕ್ ಗಳ ಎ.ಟಿ.ಎಂ.ಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 2.19 ಕೋಟಿ ರೂ. ಜಫ್ತಿ ಮಾಡಲಾಗಿದೆ. ಸೂಕ್ತವಾದ ದಾಖಲೆ ಇಲ್ಲದ ಕಾರಣಕ್ಕೆ ಹಣ ಜಫ್ತಿ ಮಾಡಲಾಗಿದ್ದು, ಐ.ಟಿ. ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಚೆಕ್ ಪೋಸ್ಟ್ ನಲ್ಲಿ ವಾಹನಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ದಾಖಲೆ ಇಲ್ಲದೇ ಬ್ಯಾಂಕ್ ಸಿಬ್ಬಂದಿ ಹಣ ಸಾಗಿಸುತ್ತಿರುವುದು ಕಂಡುಬಂದ ಕಾರಣ ಹಣ ಜಫ್ತಿ ಮಾಡಲಾಗಿದೆ. ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಕೂಡ ಆಗಮಿಸಿ ಬ್ಯಾಂಕ್ ಗೆ ಸೇರಿದ ಹಣವೆಂದು ಸ್ಪಷ್ಟಪಡಿಸಿದ್ದಾರೆ. ಹಣ ಸಾಗಿಸುವ ವಾಹನದ ಸಂಖ್ಯೆ ಮತ್ತು ದಾಖಲಾತಿಯಲ್ಲಿನ ವಾಹನದ ಸಂಖ್ಯೆಗೆ ವ್ಯತ್ಯಾಸವಿದ್ದ ಕಾರಣ ಸೂಕ್ತವಾದ ದಾಖಲೆ ಸಲ್ಲಿಸುವಂತೆ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿ, ಹಣ ಜಫ್ತಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...