alex Certify
ಕನ್ನಡ ದುನಿಯಾ       Mobile App
       

Kannada Duniya

ನಲಪಾಡ್ ಹ್ಯಾರಿಸ್ ಬೆಂಬಲಿಗರ ಬೆದರಿಕೆ, ದೂರು ನೀಡಿದ ವಕೀಲ

ಬೆಂಗಳೂರು: ಮಹಮ್ಮದ್ ನಲಪಾಡ್ ಹ್ಯಾರಿಸ್ ಬೆಂಬಲಿಗರು ಬೆದರಿಕೆ ಹಾಕಿರುವ ಕುರಿತು, ಹಲ್ಲೆಗೊಳಗಾದ ವಿದ್ವತ್ ಪರ ವಕೀಲ ಶ್ಯಾಮ್ ಸುಂದರ್ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ನಿನ್ನೆ ಕೋರ್ಟ್ ಗೆ ನಲಪಾಡ್ ಹ್ಯಾರಿಸ್ ಮತ್ತು ಆತನ ಸಹಚರರನ್ನು ಕರೆದುಕೊಂಡು ಬಂದ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿ ನಲಪಾಡ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಅವರನ್ನು ಹೊರಗೆ ಕಳಿಸುವಂತೆ ವಕೀಲರು ಹೇಳಿದ್ದರು.

ನಲಪಾಡ್ ವಿರುದ್ಧ ವಾದ ಮಾಡಿ ಹೊರ ಬಂದ ಸಂದರ್ಭದಲ್ಲಿ ಕೆಲವರು ಪರೋಕ್ಷವಾಗಿ ಮಾತನಾಡುತ್ತಾ, ವಕೀಲ ಶ್ಯಾಮ್ ಸುಂದರ್ ಅವರಿಗೆ ಬೆದರಿಕೆ ಹಾಕಿದ್ದು, ಅವರು ನಿನ್ನೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...