alex Certify
ಕನ್ನಡ ದುನಿಯಾ       Mobile App
       

Kannada Duniya

11 ಶಾಸಕರ ಮೊಬೈಲ್ ಬಳಕೆಗೆ ಬ್ರೇಕ್

mla-mobile

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಕಾರಣಕ್ಕೆ, ಬೆಂಗಳೂರಿನ ರೆಸಾರ್ಟ್ ನಲ್ಲಿ ತಂಗಿರುವ ಗುಜರಾತ್ ಕಾಂಗ್ರೆಸ್ ನ 11 ಶಾಸಕರಿಗೆ ಮೊಬೈಲ್ ಬಳಸದಂತೆ ನಿರ್ಬಂಧ ಹೇರಲಾಗಿದೆ.

ಹಿರಿಯ ಮತ್ತು ನಂಬಿಕಸ್ಥ ಶಾಸಕರಿಗೆ ಮಾತ್ರ ಮೊಬೈಲ್ ಬಳಕೆಗೆ ಅನುಮತಿ ನೀಡಿದ್ದು, ಉಳಿದ 11 ಶಾಸಕರಿಗೆ ಮೊಬೈಲ್ ಬಳಸದಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಬೇರೆ ಪಕ್ಷದವರು ಸಂಪರ್ಕಿಸಿ ಪಕ್ಷಾಂತರಕ್ಕೆ ಕಾರಣವಾಗಬಹುದೆಂದು ಮೊಬೈಲ್ ಬಳಸದಿರಲು ಸೂಚಿಸಲಾಗಿದೆ. ಇದಕ್ಕೆ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುಜರಾತ್ ನಲ್ಲಿ ಭಾರೀ ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ತಮ್ಮ ಕ್ಷೇತ್ರಗಳ ಜನರಿಗೆ ಸ್ಪಂದಿಸಲು ಮೊಬೈಲ್ ಬಳಸಬೇಕಿದೆ ಎಂದು ಅನೇಕ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.

ಆಗಸ್ಟ್ 8 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಹೆಚ್ಚು ದಿನ ರೆಸಾರ್ಟ್ ನಲ್ಲಿ ಇರಲು ಸಾಧ್ಯವಿಲ್ಲ ಎಂದು ಶಾಸಕರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...