alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಿಂದ ಪರಾರಿಯಾದ ವರ ಠಾಣೆಯಲ್ಲಿ ಮದುವೆಯಾದ

ಬೆಂಗಳೂರು: ದೇವಾಲಯದಲ್ಲಿ ಮದುವೆ ಬೇಡವೆಂದು ಪರಾರಿಯಾಗಿದ್ದ ವರ, ಬಳಿಕ ಪೊಲೀಸ್ ಠಾಣೆಯಲ್ಲಿ ಮದುವೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಶ್ವನಾಥಪುರದಲ್ಲಿ ನಡೆದಿದೆ.

ದೇವಾಲಯದಲ್ಲಿ ಮದುವೆ ನಿಶ್ಚಯವಾಗಿದ್ದು, ವರ ಮದುವೆ ಬೇಡವೆಂದು ಪರಾರಿಯಾಗಿದ್ದಾನೆ. ಇದರಿಂದ ಕಂಗಾಲಾದ ವಧುವಿನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವರನ ಕುಟುಂಬದವರು ಕೂಡ ಠಾಣೆಗೆ ತೆರಳಿದ್ದಾರೆ.

ಕೊನೆಗೆ ಪರಾರಿಯಾಗಿದ್ದ ವರನನ್ನು ಪತ್ತೆ ಮಾಡಿದ ಪೊಲೀಸರು ಎರಡೂ ಕುಟುಂಬದವರನ್ನು ಸಮಾಧಾನಪಡಿಸಿ, ಠಾಣೆಯಲ್ಲಿ ಮದುವೆ ಮಾಡಿಸಿದ್ದಾರೆ. ಎರಡೂ ಕುಟುಂಬದವರು ಈ ಸಂದರ್ಭದಲ್ಲಿದ್ದು, ವಧು ವರರನ್ನು ಆಶೀರ್ವದಿಸಿದ್ದಾರೆ. ಬಳಿಕ ವರನ ಇಚ್ಛೆಯಂತೆ ಗ್ರಾಮದಲ್ಲಿ ಮತ್ತೆ ಮದುವೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...