alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿನ ಸಮೀಪಿಸುತ್ತಿದ್ದಂತೆ ಉಲ್ಟಾ ಹೊಡೆದ ಯುವಕ

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡ ಯುವಕನೊಬ್ಬ ಮದುವೆ ದಿನ ಸಮೀಪಿಸುತ್ತಿರುವಂತೆ, ಕ್ಷುಲ್ಲಕ ಕಾರಣ ನೀಡಿ ಮದುವೆ ನಿಲ್ಲಿಸಲು ಮುಂದಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮತ್ತು ಆಕೆಯ ಮನೆಯವರು ಯುವಕನ ಮನೆ ಎದುರು ಧರಣಿ ಕುಳಿತಿದ್ದಾರೆ.

ಬೆಂಗಳೂರು ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಾಂತಿ ಎಂಬ ಯುವತಿಯೊಂದಿಗೆ ಕಳೆದ ನವೆಂಬರ್ 26 ರಂದು ಪುನೀತ್ ನಿಶ್ಚಿತಾರ್ಥ ನೆರವೇರಿದೆ. ಏಪ್ರಿಲ್ 21, 22 ರಂದು ಮದುವೆಗಾಗಿ ದಿನಾಂಕ ನಿಗದಿ ಮಾಡಿ ಸಿದ್ಧತೆ ನಡೆಸಲಾಗಿದೆ.

ಹೀಗಿರುವಾಗಲೇ ತನ್ನ ತಾಯಿಗೆ ಯುವತಿ ಬೈದಾಡಿದ್ದಾಗಿ ಆರೋಪಿಸಿ, ಪುನೀತ್ ಮದುವೆಯಾಗಲು ಹಿಂದೇಟು ಹಾಕಿದ್ದಾನೆ. ಇದರಿಂದ ಆತಂಕಗೊಂಡ ಶಾಂತಿ ಮತ್ತು ಆಕೆಯ ಪೋಷಕರು ಯುವಕನ ಮನೆ ಎದುರು ಧರಣಿ ನಡೆಸಿದ್ದಾರೆ.

ಪುನೀತ್ ತನ್ನ ಸಹೋದರನೊಂದಿಗೆ ಸೇರಿ ಶಾಂತಿ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿಶ್ಚಿತಾರ್ಥದ ಬಳಿಕ ಯುವತಿಯೊಂದಿಗೆ ಚೆನ್ನಾಗಿಯೇ ಓಡಾಡಿಕೊಂಡಿದ್ದ ಪುನೀತ್ ಈಗ ಮದುವೆಗೆ ನಿರಾಕರಿಸುತ್ತಿದ್ದಾನೆ ಎಂದು ದೂರು ನೀಡಲಾಗಿದೆ. ಮಾಹಿತಿ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...