alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಿಂದಲೇ ವಧು ಪರಾರಿ, ಕಾರಣ ಗೊತ್ತಾ…?

ಬೆಂಗಳೂರು: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲಾ ಸೇರಿದ್ದರು. ರಾತ್ರಿ ಆರತಕ್ಷತೆ ಮುಗಿದು ಬೆಳಿಗ್ಗೆ ಮುಹೂರ್ತ ನಡೆಯಬೇಕಿತ್ತು. ಆದರೆ, ಮದುವೆ ಮನೆಯಿಂದಲೇ ವಧು ಪರಾರಿಯಾದ ಘಟನೆ ನಡೆದಿದೆ.

ಮೊಗ್ಗಿನ ಜಡೆ ಸರಿಯಾಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಧು ಜಗಳವಾಡಿದ್ದು, ಇದೇ ವಿಚಾರಕ್ಕೆ ಮದುವೆ ಮುರಿದು ಬಿದ್ದಿದೆ. ವಧು ಹಾಗೂ ಅವರ ಕಡೆಯವರು ಮಂಟಪದಿಂದ ಪರಾರಿಯಾಗಿದ್ದಾರೆ. ವರನ ಕಡೆಯವರು ದಿಕ್ಕು ತೋಚದಂತಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಭೀಮಾಕನಹಳ್ಳಿಯ ಕಲ್ಯಾಣ ಮಂದಿರದಲ್ಲಿ ಮದುವೆ ನಿಗದಿಯಾಗಿದ್ದು, ರಾತ್ರಿ ಆರತಕ್ಷತೆ ನಡೆದಿದೆ.

ರಾತ್ರಿಯವರೆಗೂ ಮದುವೆ ಕಾರ್ಯಗಳೆಲ್ಲಾ ನಡೆದಿದ್ದು, ಆ ನಂತರದಲ್ಲಿ ವಧು ಜಗಳವಾಡಿ ಮಂಟಪದಿಂದ ಕುಟುಂಬದವರನ್ನೆಲ್ಲಾ ಕರೆದುಕೊಂಡು ಹೋಗಿದ್ದಾಳೆ. ಕೊನೆಗೆ ಮದುವೆಯನ್ನೇ ನಿಲ್ಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...