alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತಿನಲ್ಲಿ ರಾರಾಜಿಸುತ್ತಿದೆ ಬೆಂಗಳೂರು ವ್ಯಕ್ತಿ ತೆಗೆದ ಈ ಫೋಟೋ

12688363_10153255172841587_1190202388508944703_n

ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಐ ಫೋನ್ 6 ಎಸ್ ನಲ್ಲಿ ತೆಗೆದಿರುವ ಈ ಫೋಟೋ ಇಂದು ಆಪಲ್ ಕಂಪನಿಯ ಜಾಹೀರಾತಿನಲ್ಲಿ ವಿಶ್ವದಾದ್ಯಂತ ರಾರಾಜಿಸುತ್ತಿದೆ. ದೀಪಾವಳಿ ಹಬ್ಬದಂದು ದೀಪ ಹಿಡಿದು ಬರುತ್ತಿದ್ದ ತಮ್ಮ ಪತ್ನಿಯ ಫೋಟೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಇವರು, ಇಂದು ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದ್ದಾರೆ.

ಬೆಂಗಳೂರಿನ ನಿವಾಸಿ ಆಶೀಶ್ ಪಾರ್ಮರ್, ದೀಪಾವಳಿ ಹಬ್ಬದಂದು ಮನೆಯ ಸುತ್ತಲೂ ದೀಪಗಳನ್ನು ಜೋಡಿಸುತ್ತಿದ್ದ ಪತ್ನಿ ರಿಯಾನಾ ನಾಣಯ್ಯರವರ ಫೋಟೋವನ್ನು ತಮ್ಮ ಐ ಫೋನ್ 6 ಎಸ್ ನಲ್ಲಿ ತೆಗೆದಿದ್ದರು. ತಾವು ತೆಗೆದ ಚಿತ್ರವನ್ನು ಆಪಲ್ ಕಂಪನಿ ಆಯೋಜಿಸಿದ್ದ ‘Shot on iPhone 6’ ಸ್ಪರ್ಧೆಗೆ ಕಳುಹಿಸಿದ್ದರು.

ವಿಶ್ವದಾದ್ಯಂತ ಈ ಸ್ಪರ್ಧೆಗೆ ಫೋಟೋಗಳು ಬಂದಿದ್ದು, ಈ ಪೈಕಿ 53 ಚಿತ್ರಗಳನ್ನು ಆಪಲ್ ಕಂಪನಿ ಆಯ್ಕೆ ಮಾಡಿಕೊಂಡಿದೆ. ಇವುಗಳಲ್ಲಿ ಬೆಂಗಳೂರಿನ ಆಶೀಶ್ ಪಾರ್ಮರ್ ತೆಗೆದ ಚಿತ್ರವೂ ಒಂದಾಗಿದ್ದು, ಈ ಚಿತ್ರ ಆಪಲ್ ಕಂಪನಿಯ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

shot-on-iphone-6_650x650_51457001616

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...