alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ವೈರಲ್ ! ಯುವತಿ ಮನೆಗೆ, ಪ್ರಿಯಕರ ಜೈಲಿಗೆ

vyra-ben-lovers

ಬೆಂಗಳೂರು: ಅವರಿಬ್ಬರೂ ಪರಸ್ಪರ ಪ್ರೀತಿಸಿ ಮನೆಯವರ ವಿರೋಧವನ್ನೂ ಲೆಕ್ಕಿಸದೇ ಮದುವೆಯಾಗಿದ್ದಾರೆ. ಆದರೆ, ಈಗ ಇಬ್ಬರು ಜೊತೆಯಾಗಿಲ್ಲ. ಯುವತಿ ಪೋಷಕರೊಂದಿಗೆ ಹೋದರೆ, ಯುವಕ ಜೈಲು ಪಾಲಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕ ಹಾಗೂ ಯುವತಿ 2 ವರ್ಷಗಳಿಂದ ಪ್ರೀತಿಸಿದ್ದು, ಅನ್ಯ ಜಾತಿಯವರಾಗಿದ್ದ ಕಾರಣ ಮದುವೆಗೆ ಮನೆಯಲ್ಲಿ ವಿರೋಧವಿತ್ತು.

ಇಬ್ಬರೂ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಯುವತಿ 17 ವರ್ಷ ವಯಸ್ಸಿನವಳಾಗಿದ್ದ ಆಕೆಯ ಪೋಷಕರು ದೂರು ನೀಡಿದ್ದಾರೆ.

ತಮಗೆ ಮದುವೆಯಾಗಿದ್ದು, ತಮ್ಮ ಪಾಡಿಗೆ ಬದುಕಲು ಬಿಡಿ. ತಮಗೆ ಬೆದರಿಕೆ ಇದ್ದು, ಸಾವೇ ನಮಗೆ ದಾರಿ ಎಂದೆಲ್ಲಾ ಹೇಳಿ ಯುವತಿ ಹಾಗೂ ಯುವಕ ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಅವರು ಇರುವ ಸ್ಥಳವನ್ನು ಪತ್ತೆ ಮಾಡಿದ ಪೊಲೀಸರು ಇಬ್ಬರನ್ನು ಕರೆದುಕೊಂಡು ಬಂದಿದ್ದಾರೆ. ಅಪ್ರಾಪ್ತೆಯನ್ನು ಪೋಷಕರೊಂದಿಗೆ ಕಳುಹಿಸಿದ್ದಾರೆ. ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...