alex Certify
ಕನ್ನಡ ದುನಿಯಾ       Mobile App
       

Kannada Duniya

ವಿಭಿನ್ನವಾಗಿ ಪ್ರಪೋಸ್ ಮಾಡುವ ಪ್ರೇಮಿಗಳಿಗೆ ಖುಷಿ ಸುದ್ದಿ

ಬೆಂಗಳೂರು: ಈ ಬಾರಿ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಆಗಿ, ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾಗಿರುವ ಯುವ ಜೋಡಿಗಳಿಗೆ ಸಿಹಿ ಸುದ್ದಿ ಇಲ್ಲಿದೆ.

ಆಕಾಶದಲ್ಲಿ ಹಾರಾಡುತ್ತಾ ಮೋಡಗಳ ನಡುವೆ ಲವ್ವರ್ ಗೆ ಪ್ರಪೋಸ್ ಮಾಡುವ ಸದವಕಾಶವನ್ನು ಜಕ್ಕೂರು ಏರೋಡ್ರಂನಲ್ಲಿ ಕಲ್ಪಿಸಲಾಗಿದೆ.

ಇದೇ 14 ರಂದು ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಕೇಂದ್ರದಲ್ಲಿ ಖಾಸಗಿ ವಿಮಾನ ಸಂಸ್ಥೆ, ಪ್ರತಿ ಜೋಡಿಗೆ 5000 ರೂ.ಗೆ ವಿಮಾನದಲ್ಲಿ ಹಾರಾಡುತ್ತಾ ಪ್ರಪೋಸ್ ಮಾಡುವ ಅವಕಾಶ ಕಲ್ಪಿಸಿದೆ.

ಪ್ರೇಮಿಗಳು ಅರ್ಧ ಗಂಟೆ ವಿಮಾನದಲ್ಲಿ ಹಾರಾಡಬಹುದು. ಪ್ರೇಮಿಗಳಿಗೆ ಕೇಕ್, ಗುಲಾಬಿ, ಬಲೂನ್ ನೀಡಲಾಗುತ್ತೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಅವಕಾಶವಿದ್ದು, ಪ್ರೇಮಿಗಳು ಆಕಾಶದಲ್ಲಿ ಹಾರಾಡುತ್ತಾ ಮೋಡಗಳ ನಡುವೆ ಪ್ರೇಮ ನಿವೇದನೆ ಮಾಡಿಕೊಳ್ಳಬಹುದಾಗಿದೆ.

4 ಮಂದಿ ಕೂರುವ 2 ಫ್ಲೈಟ್ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಪ್ರಪೋಸ್ ಮಾಡುವ ಕಪಲ್ಸ್ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...