alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಿಯತಮೆ ಎದುರು ಅನುಚಿತ ವರ್ತನೆ

ಬೆಂಗಳೂರು: ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕಾಮುಕನೊಬ್ಬ ಮಾಜಿ ಪ್ರಿಯತಮೆ ಎದುರು ಪ್ಯಾಂಟ್ ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ.

ಮಾರ್ಚ್ 31 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಾನ್ ಎಂಬಾತನೇ ಇಂತಹ ಕೃತ್ಯವೆಸಗಿದವ. 7 ವರ್ಷದ ಹಿಂದೆ ಜಾನ್ ಹಾಗೂ ದೂರು ನೀಡಿರುವ ಯುವತಿ ಪ್ರೀತಿಸಿದ್ದು, ಕಾರಣಾಂತರದಿಂದ ಬೇರೆಯಾಗಿದ್ದರು.

ಇತ್ತೀಚೆಗೆ ಯುವತಿ ಬೇರೆ ಯುವಕನನೊಂದಿಗೆ ಗೆಳೆತನ ಬೆಳೆಸಿದ್ದನ್ನು ತಿಳಿದ ಜಾನ್, ತನ್ನನ್ನು ಮತ್ತೆ ಪ್ರೀತಿಸುವಂತೆ ಯುವತಿಗೆ ಕಾಟ ಕೊಟ್ಟಿದ್ದಾನೆ. ಆದರೆ, ಯುವತಿ ಒಪ್ಪದಿದ್ದಾಗ, ಪ್ಯಾಂಟ್ ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ.

ಇದಕ್ಕೆ ಯುವತಿ ಆಕ್ಷೇಪಿಸಿದಾಗ, ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...