alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಡ್ಜ್ ನಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಂದಿಗೆ ಲಾಡ್ಜ್ ನಲ್ಲಿ ತಂಗಿದ ಯುವಕ, ವಿಷದ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು ಬಿ.ಹೆಚ್.ಆರ್. ಲೇಔಟ್ ಲಾಡ್ಜ್ ನಲ್ಲಿ ತಂಗಿದ್ದ ಬಾಣಸವಾಡಿ ಸುಬ್ಬಯ್ಯಪಾಳ್ಯ ನಿವಾಸಿ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವರು. ಸಂಬಂಧಿಕರ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಆಕೆಯೊಂದಿಗೆ ಲಾಡ್ಜ್ ನಲ್ಲಿ ತಂಗಿದ್ದಾನೆ.

ಸ್ನೇಹಿತರನ್ನು ಭೇಟಿ ಮಾಡುವುದಾಗಿ ಹೊರ ಹೋಗಿದ್ದ ಆತ ಮದ್ಯ ಸೇವನೆ ಮಾಡಿ ಬಂದಿದ್ದು, ಯುವತಿ ಜಗಳವಾಡಿ ನಿದ್ದೆಗೆ ಜಾರಿದ್ದಾಳೆ. ಮದ್ಯ ರಾತ್ರಿ ಆಕೆಗೆ ಎಚ್ಚರವಾದ ಸಂದರ್ಭದಲ್ಲಿ ಯುವಕ ಅರೆಪ್ರಜ್ಞಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಹೋಟೆಲ್ ಸಿಬ್ಬಂದಿಯ ನೆರವಿನಿಂದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟದ್ದಾನೆ. ಯುವಕನ ಕೈಯಲ್ಲಿ ಇಂಜೆಕ್ಷನ್ ಕಂಡು ಬಂದಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...