alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ವಿಚಾರಕ್ಕೆ ನಡೀತು ಸಾಂಬಾರ್ ದಾಳಿ

sambharಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕ, ಬಾಡಿಗೆದಾರರ ಮೇಲೆ ಬಿಸಿ ಸಾಂಬಾರ್ ಎರಚಿರುವ ಘಟನೆ ಬೆಂಗಳೂರಿನ ಹನುಮಂತನಗರದ ರಾಘವೇಂದ್ರ ಬ್ಲಾಕ್ ನಲ್ಲಿ ನಡೆದಿದೆ.

ಹೇಮಲತಾ ಎಂಬಾಕೆ, ಶಿವರಾಮ್ ಎಂಬುವವರ ಮನೆಯನ್ನು ಬಾಡಿಗೆ ಪಡೆದು ಪಿಜಿ ನಡೆಸುತ್ತಿದ್ರು. ಆದ್ರೆ 3 ತಿಂಗಳುಗಳಿಂದ ಬಾಡಿಗೆ ಕಟ್ಟಿರಲಿಲ್ಲ. ಶುಕ್ರವಾರ ರಾತ್ರಿ ಪಿಜಿಗೆ ಬಂದ ಮನೆ ಮಾಲೀಕ ಶಿವರಾಮ್ ಬಾಡಿಗೆ ಕೊಡುವಂತೆ ಕೇಳಿದ್ದಾರೆ.

ಇದೇ ವಿಚಾರಕ್ಕೆ ಶಿವರಾಮ್, ಹೇಮಲತಾ, ಆಕೆಯ ಪುತ್ರ ಶ್ರೇಯಸ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಶಿವರಾಮ್ ಪುತ್ರಿ ಕೂಡ ಜಗಳದಲ್ಲಿ ಸೇರಿಕೊಂಡಿದ್ದಾರೆ. ಜಗಳ ತಾರಕಕ್ಕೇರುತ್ತಿದ್ದಂತೆ ಸಿಟ್ಟಿನ ಭರದಲ್ಲಿ ಶಿವರಾಮ್, ಹೇಮಲತಾ ಮತ್ತು ಶ್ರೇಯಸ್ ಮೇಲೆ ಒಲೆ ಮೇಲಿದ್ದ ಬಿಸಿ ಸಾಂಬಾರ್ ಎರಚಿದ್ದಾರೆ. ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಶಿವರಾಮ್ ಹಾಗೂ ಹೇಮಲತಾ ಇಬ್ಬರೂ ಪರಸ್ಪರರ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...