alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಅಂಗಾಂಗ ಪ್ರದರ್ಶಿಸಿದ ಯುವತಿ

ben-gg-dd

ಬೆಂಗಳೂರು: ತಡರಾತ್ರಿ ಕಾಮುಕರು ವಿಚಿತ್ರವಾಗಿ ವರ್ತಿಸಿದ ಘಟನೆ ಬೆಂಗಳೂರು ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರ ಕ್ರಾಸ್ ಬಳಿ ನಡೆದಿದೆ.

ಓರ್ವ ಯುವತಿಯನ್ನು ಅರೆನಗ್ನಗೊಳಿಸಿ ಮೂವರು ಯುವಕರು ಆಕೆಯ ಸುತ್ತ ತಿರುಗಾಡಿದ್ದಾರೆ. ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ನಿಲ್ಲಿಸಿ, ಹಣ ಕೊಟ್ಟು ಮಜಾ ಮಾಡಿ ಎಂದು ಹೇಳಿದ್ದಾರೆ.

ಇದರಿಂದ ಗಾಬರಿಗೊಂಡ ವಾಹನ ಸವಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಯುವಕರು ಆಕೆಯ ಸುತ್ತ ಸುತ್ತುವಾಗ ಯುವತಿ ಕೂಡ ಸಹಕಾರ ನೀಡಿ, ಅರೆಬೆತ್ತಲೆ ಕಾಣಿಸಿಕೊಂಡು ಅಂಗಾಂಗ ಪ್ರದರ್ಶಿಸಿದ್ದಾಳೆ ಎನ್ನಲಾಗಿದೆ.

ಇದರಿಂದಾಗಿ ಈ ರಸ್ತೆಯಲ್ಲಿ ಸಾಗುವವರು ಮುಜುಗರ ಅನುಭವಿಸುವಂತಾಗಿದೆ.

ಇದೇ ದಾರಿಯಲ್ಲಿ ಬಂದ ಮಹಿಳೆ ಮಡಿವಾಳ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅರೆನಗ್ನವಾಗಿದ್ದ ಯುವತಿ ಹಾಗೂ ಆಕೆಯೊಂದಿಗೆ ಇದ್ದ ಜಲಾಲ್ ಪಾಶ, ರಾಹುಲ್, ಇನಾಯತ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಇವರೆಲ್ಲರೂ ಸ್ನೇಹಿತರಾಗಿದ್ದಾರೆ ಎನ್ನಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ಪಬ್ಲಿಕ್ ಗೆ ತೊಂದರೆ, ಮಹಿಳೆ ಗೌರವಕ್ಕೆ ಧಕ್ಕೆ ಮೊದಲಾದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...