alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗ್ನಲ್ ನಲ್ಲೇ ಯುವ ಜೋಡಿ ಅಸಭ್ಯ ವರ್ತನೆ

ಬೆಂಗಳೂರು: ಕಾರಿನಲ್ಲಿ ಯುವ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವ ಜೋಡಿ ಸಿಗ್ನಲ್ ನಲ್ಲೇ ಚುಂಬಿಸಿಕೊಂಡು ಚಲಿಸುವ ಕಾರಿನಲ್ಲೇ ಬಿಯರ್ ಕುಡಿದಿದ್ದಾರೆ.

ನಿನ್ನೆ ಮಧ್ಯಾಹ್ನ ಮದ್ಯ ಸೇವಿಸಿದ್ದ ಯುವತಿ –ಯುವಕ, ಕಾರ್ ನಲ್ಲಿ ಪ್ರೇಜರ್ ಟೌನ್ ನಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಹಲಸೂರು ಕಡೆ ಹೊರಟಿದ್ದಾರೆ.

ಇವರು ಕಾರಿನಲ್ಲಿ ಅನುಚಿತವಾಗಿ ವರ್ತಿಸುತ್ತಾ ಬಿಯರ್ ಕುಡಿಯುತ್ತಿರುವುದನ್ನು ಗಮನಿಸಿದ ಲಿಂಗರಾಜಪುರ ನಿವಾಸಿ ಮಹಿಳೆ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಮಕ್ಕಳನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದ ಮಹಿಳೆ ಹಲಸೂರು ಸಿಗ್ನಲ್ ನಲ್ಲಿ ಕಾರಿನಲ್ಲಿಯೇ ಯುವ ಜೋಡಿ ಮೈಮರೆತಿದ್ದನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಇದನ್ನು ಗಮನಿಸಿದ ಯುವಕ ಕೈಯಲ್ಲಿದ್ದ ಬಿಯರ್ ಬಾಟಲಿ ತೋರಿಸಿ ಕುಡಿಯುತ್ತಿರಾ ಎಂದು ಕೇಳಿದ್ದಾನೆ. ಅಲ್ಲಿಂದ ಕಾರ್ ಮುಂದೆ ಸಾಗಿದೆ.

ಪಬ್ಲಿಕ್ ಪ್ಲೇಸ್ ನಲ್ಲಿ ಅಸಭ್ಯವಾಗಿ ವರ್ತಿಸಿದ ಯುವ ಜೋಡಿಯ ದೃಶ್ಯಗಳನ್ನು ಸೆರೆ ಹಿಡಿದ ಮಹಿಳೆ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರಿನ ನಂಬರ್ ಆಧರಿಸಿ ಯುವಕ, ಯುವತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...