alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲೊಬ್ಬ ಕಾಮಾಂಧ ಪ್ರಾಂಶುಪಾಲ

princi

ಬೆಂಗಳೂರಿನ ಸದಾಶಿವನಗರದಲ್ಲಿರೋ ಕೇಂದ್ರೀಯ ವಿದ್ಯಾಲಯದ ಕಾಮುಕ ಪ್ರಾಂಶುಪಾಲನ ಮುಖವಾಡ ಕಳಚಿ ಬಿದ್ದಿದೆ. ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ಮಕ್ಕಳಿಗೆ ಲೈಂಗಿಕ ಕಿರುಕೊಳ ಕೊಡ್ತಾ ಇದ್ದ ಅನ್ನೋದು ಬಯಲಾಗಿದೆ. ಮಕ್ಕಳಿಗೆ ನೀತಿ ಪಾಠ ಹೇಳಿಕೊಡುವ ಬದಲು ಕುಮಾರ್ ಠಾಕೂರ್ ಕಾಮದ ಪಾಠ ಮಾಡ್ತಾ ಇದ್ದ.

‘ಎಲ್ರೂ ಬಾಯ್ ಫ್ರೆಂಡ್ ಮಾಡ್ಕೊಳ್ಳಿ, ಸನ್ನಿ ಲಿಯೋನ್ ನಿಮಗೆಲ್ಲ ಮಾದರಿಯಾಗ್ತಾಳೆ, ಅಂತಹ ಆಟಿಕೆಗಳನ್ನೇ ಬಳಸಿ, ಆಗಾಗ ನನ್ನನ್ನು ಭೇಟಿ ಮಾಡಿ, ನಾನು ನಿಮಗೆ ಆರ್ಥಿಕ ಹಾಗೂ ನೈತಿಕ ಬೆಂಬಲ ಕೊಡ್ತೇನೆ, ಇಲ್ಲವಾದ್ರೆ ನಿಮಗೆ ಒಳ್ಳೆ ಅಂಕ ಸಿಗಲು ಸಾಧ್ಯವಿಲ್ಲ’ ಅಂತಾ ವಿದ್ಯಾರ್ಥಿನಿಯರನ್ನು ಈತ ಬ್ಲಾಕ್ ಮೇಲ್ ಮಾಡ್ತಾ ಇದ್ದ.

ಜನವರಿ 26ರಂದು ಸಂಜೆ 7.20ರಿಂದ 8.10ರ ಸಮಯದಲ್ಲಿ ಇದೇ ಶಾಲೆಯ ಭೌತಶಾಸ್ತ್ರ ಶಿಕ್ಷಕ ಷಣ್ಮುಗಂ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಂಶುಪಾಲ ಕುಮಾರ್ ಠಾಕೂರ್ ಚೇಂಬರ್ ಗೆ ಕರೆತಂದಿದ್ದ. ಆಗಾಗ ತನ್ನನ್ನು ಭೇಟಿ ಮಾಡುವಂತೆ ಬಾಲಕಿಗೆ ಸೂಚಿಸಿದ ಪ್ರಿನ್ಸಿಪಾಲ್ ಆಕೆಗೆ ಚಾಕಲೇಟ್ ಕೊಟ್ಟಿದ್ದ. ಅಲ್ಲಿಂದ ಹೊರಬರುವಷ್ಟರಲ್ಲಿ ಲೈಟ್ ಗಳೆಲ್ಲ ಬಂದ್ ಆಗಿದ್ವು ಅಂತಾ ಬಾಲಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಈ ಘಟನೆ ನಡೆಯುವ ಮುನ್ನ ಅಂದ್ರೆ ಜನವರಿ  25ರಂದೇ ಕಾಮುಕ ಪ್ರಾಂಶುಪಾಲನ ಬಗ್ಗೆ ‘ನೋಡಲ್ ಚೈಲ್ಡ್ ಲೈನ್’ ನಿರ್ದೇಶಕ ವಸುದೇವ ಶರ್ಮಾ, ಸೆಂಟ್ರಲ್ ಡಿವಿಷನ್ ಡಿಸಿಪಿ ಡಾ.ಚಂದ್ರಗುಪ್ತ ಅವರಿಗೆ ಪತ್ರವೊಂದನ್ನು ಬರೆದಿದ್ರು. 10 ಮತ್ತು 12ನೇ ತರಗತಿಯ ಹೆಣ್ಣುಮಕ್ಕಳ ಜೊತೆ ಠಾಕೂರ್ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ರು.

ಮಕ್ಕಳ ಸಹಾಯವಾಗಿ 1908ಗೆ ಕರೆ ಮಾಡಿದ್ದ ಕೇಂದ್ರೀಯ ವಿದ್ಯಾಲಯದ ಸಿಬ್ಬಂದಿಯೊಬ್ಬ ಕಾಮಾಂಧ ಪ್ರಾಂಶುಪಾಲನ ಬಗ್ಗೆ ವಿವರ ನೀಡಿದ್ದ. ವಿದ್ಯಾರ್ಥಿನಿಯರನ್ನು ಮತ್ತು ಶಾಲೆಯ ಯುವ ಶಿಕ್ಷಕಿಯರನ್ನು ಚೇಂಬರ್ ಗೆ ಕರೆಸಿಕೊಂಡು ಅಶ್ಲೀಲ ಫೋಟೋಗಳನ್ನು ತೋರಿಸುತ್ತಿದ್ದ. ಅವರಿಗೆ ವಾಟ್ಸಾಪ್ ಮೂಲಕ ಅಸಭ್ಯ ಮೆಸೇಜ್ ಗಳನ್ನು ಕೂಡ ಕಳಿಸುತ್ತಿದ್ದ ಎಂಬೆಲ್ಲ ಮಾಹಿತಿಯನ್ನು ಸಿಬ್ಬಂದಿಯೇ ನೀಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...