alex Certify
ಕನ್ನಡ ದುನಿಯಾ       Mobile App
       

Kannada Duniya

ಭಾವನ ಲವ್ವಲ್ಲಿ ಬಿದ್ದವಳು ಮಾಡಿದ್ಲು ಮಾಸ್ಟರ್ ಪ್ಲಾನ್

Abuse

ಬೆಂಗಳೂರು: ಬೆಂಗಳೂರು ಕೆ.ಜಿ. ಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ, ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಆಕೆಯ ಭಾವ ಇರ್ಷಾದ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ನಾದಿನಿಯನ್ನು ಮದುವೆಯಾಗಲು ಮೊದಲೇ ಪ್ಲಾನ್ ಮಾಡಿ, ಲೈಂಗಿಕ ದೌರ್ಜನ್ಯ ಪ್ರಕರಣ ಸೃಷ್ಠಿಸಲಾಗಿದೆ ಎಂದು ಹೇಳಲಾಗಿದೆ.

ಪತ್ನಿಯ ತಂಗಿಯನ್ನು ಪ್ರೀತಿಸುತ್ತಿದ್ದ ಇರ್ಷಾದ್, ಕಮ್ಮನಹಳ್ಳಿ ಘಟನೆಯಿಂದ ಸ್ಪೂರ್ತಿ ಪಡೆದು, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕತೆ ಕಟ್ಟಿದ್ದಾನೆ.

ಲೈಂಗಿಕ ದೌರ್ಜನ್ಯ ನಡೆದಿದೆ ಎಂದರೆ ಯಾರೂ ಮದುವೆಯಾಗುವುದಿಲ್ಲ. ಆಗ ಸಂತ್ರಸ್ತೆಯನ್ನು ತಾನೇ ಮದುವೆಯಾಗುತ್ತೇನೆ ಎಂದು ಮನೆಯವರನ್ನು ಒಪ್ಪಿಸಲು ಇರ್ಷಾದ್ ಯೋಜಿಸಿದ್ದಾನೆ.

ಯುವತಿ ಕೂಡ ಭಾವನನ್ನು ಪ್ರೀತಿಸುತ್ತಿದ್ದ ಕಾರಣ ಆತ ಹೇಳಿದ್ದಕ್ಕೆ ಒಪ್ಪಿಕೊಂಡಿದ್ದಾಳೆ. ಮೊದಲೇ ಪ್ಲಾನ್ ಮಾಡಿದಂತೆಯೇ ಸಮೀಪದ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾದಲ್ಲಿ ಹಿಂಬಾಲಿಸುತ್ತಿರುವ ದೃಶ್ಯ ಸೆರೆಯಾಗುವಂತೆ ಓಡಾಡಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆಯದಿದ್ದರೂ, ಯುವತಿ ನೀಡಿದ್ದ ಗೊಂದಲದ ಹೇಳಿಕೆಗಳಿಂದ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸಿದ್ದಾರೆ.

ಸಂತ್ರಸ್ತ ಯುವತಿಯ ಕಾಲ್ ಡಿಟೇಲ್ ಮತ್ತು ಇರ್ಷಾದ್ ಕಾಲ್ ಡಿಟೇಲ್ ಪರಿಶೀಲಿಸಿದಾಗ ಇಬ್ಬರ ನಡುವೆ ಮೊದಲೇ ಮಾತುಕತೆ ನಡೆದಿರುವುದು ಗೊತ್ತಾಗಿದೆ. ಬಳಿಕ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಅಕ್ಕನ ಗಂಡನನ್ನು ಮದುವೆಯಾಗಲು ಸಂತ್ರಸ್ತೆ ಮಾಡಿದ ಪ್ಲಾನ್ ಇದಾಗಿತ್ತು ಎಂಬುದು ಗೊತ್ತಾಗಿದೆ. ಇರ್ಷಾದ್ ವಿಚಾರಣೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...