alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳುವಂತಿದೆ ಕಳ್ಳನ ಖತರ್ನಾಕ್ ಕೃತ್ಯ

ben-suranga-dd

ಬೆಂಗಳೂರು: ಕೆ.ಆರ್. ಪುರಂ, ಬೊಮ್ಮನಹಳ್ಳಿಯಲ್ಲಿ ಇತ್ತೀಚೆಗೆ ಚರಂಡಿ, ಪಕ್ಕದ ಮನೆಯಿಂದ ಕನ್ನ ಕೊರೆದು ಜುವೆಲ್ಲರಿ ಶಾಪ್ ನಿಂದ ಚಿನ್ನಾಭರಣ ದೋಚಿದ ಘಟನೆ ನಡೆದಿತ್ತು.

ರಾತ್ರಿ ಕಾಟನ್ ಪೇಟೆಯಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಲಾಡ್ಜ್ ರೂಮಿನ ಕೆಳಗೆ ಇದ್ದ ಜುವೆಲ್ಲರಿ ಶಾಪ್ ಗೆ ಕನ್ನ ಕೊರೆದು 3 ಕೆ.ಜಿ. ಚಿನ್ನಾಭರಣ ದೋಚಲಾಗಿದೆ.

ಕಾಟನ್ ಪೇಟೆಯ ಪ್ಲಾಟಿನಂ ಲಾಡ್ಜ್ ನಲ್ಲಿ ಹುಸೇನ್ ಎಂಬಾತ ರೂಂ ಬಾಡಿಗೆ ಪಡೆದುಕೊಂಡಿದ್ದ. ಇದೇ ರೂಮಿನ ಕೆಳಗೇ ಜುವೆಲರಿ ಶಾಪ್ ಇದೆ.

ರಾತ್ರಿವೇಳೆ ರೂಮಿನ ಕೆಳಭಾಗದಲ್ಲಿ ಹುಸೇನ್ ಕನ್ನ ಕೊರೆದಿದ್ದಾನೆ. ಶನಿವಾರ ರಾತ್ರಿ ತನ್ನ ಕೆಲಸ ಮುಗಿಸಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಗ್ಯಾಂಗ್ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

ಲಾಡ್ಜ್ ನಲ್ಲಿ ರೂಂ ಮಾಡಿದ್ದವ ಹಿಂದಿ ಮಾತನಾಡುತ್ತಿದ್ದ. ಈತನ ರೂಮಿನಿಂದ ಭಾರೀ ಶಬ್ಧ ಕೇಳಿಬರುತ್ತಿದ್ದ ಬಗ್ಗೆ ಅಕ್ಕಪಕ್ಕದ ರೂಮಿನವರು ಲಾಡ್ಜ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಗಮನಿಸಿರಲಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...